×
Ad

ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಯುದ್ಧ ನೌಕೆ

Update: 2016-05-11 00:31 IST

ಬೀಜಿಂಗ್, ಮೇ 10: ದಕ್ಷಿಣ ಚೀನಾ ಸಮುದ್ರದಲ್ಲಿರುವ ವಿವಾದಾಸ್ಪದ ಬಂಡೆ ಸಾಲಿನ ಸಮೀಪದಿಂದ ಅಮೆರಿಕದ ನೌಕಾಪಡೆ ಹಡಗೊಂದು ಮಂಗಳವಾರ ಹಾದುಹೋಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅದೇ ವೇಳೆ, ಇದರಿಂದ ಆಕ್ರೋಶಗೊಂಡಿರುವ ಚೀನಾ, ಅಮೆರಿಕ ನೌಕಾಪಡೆಯ ಈ ಗಸ್ತನ್ನು ಅಕ್ರಮ ಹಾಗೂ ಶಾಂತಿ ಮತ್ತು ಸ್ಥಿರತೆಗೆ ಎದುರಾದ ಬೆದರಿಕೆ ಎಂಬುದಾಗಿ ಪರಿಗಣಿಸಿದೆ. ನಿರ್ದೇಶಿತ ಕ್ಷಿಪಣಿ ನಾಶಕ ನೌಕೆ ಯುಎಸ್‌ಎಸ್ ವಿಲಿಯಂ ಪಿ. ಲಾರೆನ್ಸ್ ಚೀನಾ ಆಕ್ರಮಿತ ಫಿಯರಿ ಕ್ರಾಸ್ ರೀಫ್‌ನ 12 ನಾಟಿಕಲ್ ಮೈಲು ಅಂತರದಲ್ಲಿ ಹಾದು ಹೋಯಿತು ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರ ಬಿಲ್ ಅರ್ಬನ್ ತಿಳಿಸಿದರು.
ಈ ವಲಯದ ಮೇಲೆ ಹಕ್ಕುಗಳನ್ನು ಸಾಧಿಸುತ್ತಿರುವ ಚೀನಾ, ತೈವಾನ್ ಮತ್ತು ವಿಯೆಟ್ನಾಂಗಳ ನಿಲುವನ್ನು ಪ್ರಶ್ನಿಸಲು ‘ನೌಕಾಯಾನ ಸ್ವಾತಂತ್ರ ಅಭಿಯಾನ’ವನ್ನು ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News