ಭಾರತ ಸ್ವಾರ್ಥಿ: ಪಾಕ್
Update: 2016-05-11 00:32 IST
ವಿಶ್ವಸಂಸ್ಥೆ, ಮೇ 10: ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಹೆಚ್ಚಿನ ಖಾಯಂ ಸ್ಥಾನಗಳನ್ನು ಸೇರಿಸಬೇಕೆಂದು ಭಾರತ ಹಾಗೂ ಇತರ ಜಿ4 ದೇಶಗಳು ಮುಂದಿಟ್ಟಿರುವ ಬೇಡಿಕೆಯಲ್ಲಿ ಹುರುಳಿಲ್ಲ ಹಾಗೂ ಕೆಲವು ದೇಶಗಳ ‘‘ಸ್ವಾರ್ಥಪೂರಿತ ದೇಶಿ ಮಹತ್ವಾಕಾಂಕ್ಷೆ’’ಯನ್ನು ಇದು ಬಿಂಬಿಸುತ್ತದೆ ಎಂದು ಪಾಕಿಸ್ತಾನ ಹೇಳಿದೆ. ಭದ್ರತಾ ಮಂಡಳಿಯ ವಿಸ್ತರಣೆಯ ಉದ್ದೇಶ ಎಲ್ಲ ದೇಶಗಳ ಕಳವಳ ಮತ್ತು ಆಶೋತ್ತರಗಳಿಗೆ ಸ್ಪಂದಿಸುವುದಾಗಿರಬೇಕೇ ಹೊರತು, ಕೆಲವರದ್ದಲ್ಲ ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋದಿ ಸೋಮವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಹೇಳಿದರು.