ಚಪ್ಪಟೆ ಚೌಕ ಟಯರಿನೊಂದಿಗೆ ಹೀಥ್ರೂ ನಿಲ್ದಾಣದಲ್ಲಿ ಇಳಿದ ಬ್ರಿಟಿಷ್ ಏರ್ ವೇಸ್ವಿಮಾನ !
ಲಂಡನ್, ಮೇ 11 : ಚೌಕಾಕಾರದ ವಿಸ್ಮಯಕಾರಿ ಚಪ್ಪಟೆ ಚೌಕ ಟಯರ್ ಹೊಂದಿದ ಬ್ರಿಟಿಷ್ ಏರ್ ವೇಸ್ ನ ಎ 380 ಸೂಪರ್ ಜಂಬೋ ವಿಮಾನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿದು ವಿಮಾನಯಾನ ತಜ್ಞರನ್ನು ಆಶ್ಚರ್ಯಚಕಿತಗೊಳಿಸಿದೆ.
ಹಾಂಗ್ ಕಾಂಗ್ ನಿಂದ ಹೊರಟ ಈ ಏರ್ ಬಸ್ ತನ್ನ ಹಾರಾಟದ ಅತ್ಯಧಿಕ ಎತ್ತರವನ್ನು ತಲುಪಿದ ಅವಧಿಯಲ್ಲಿ ವಿಮಾನದ ಸಿಬ್ಬಂದಿಗೆ ಟಯರ್ ಪ್ರೆಶರ್ ಬಗ್ಗೆ ಮಾಹಿತಿ ಸಿಕ್ಕಿದರೂ, ಅಲ್ಲಿಂದ ಲಂಡನ್ನಿಗೆ ತನ್ನ 13 ಗಂಟೆಯ ಪ್ರಯಾಣ ಮುಂದುವರಿಸಿದ ವಿಮಾನವು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯ ಸಮಸ್ಯೆ ಎದುರಾಗಬಹುದೆಂದು ಗ್ರಹಿಸಿ ಟೋ ಟಗ್ ಒಂದಕ್ಕೆ ಮನವಿ ಮಾಡಲಾಗಿತ್ತು.
ಆದರೂ ವಿಮಾನ ತನ್ನ18 ಚಕ್ರಗಳಲ್ಲಿ ಒಂದು ಚಕ್ರದ ಗಾಳಿಯಿಲ್ಲದ ಹೊರತಾಗಿಯೂ ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿಯಿತು. ನಂತರ ಚಕ್ರಗಳನ್ನು ಪರೀಕ್ಷಿಸಲಾಗಿ ಒಂದು ಚಕ್ರವು ಎಲ್ಲಾ ನಾಲ್ಕು ಕಡೆಗಳಲ್ಲಿ ಚಪ್ಪಟೆ ಚೌಕವಾಗಿರುವುದು ಕಂಡು ಬಂದಿತ್ತು. ಇಂತಹ ಚಿಕ್ರವನ್ನು ಯಾವತ್ತೂ ನೋಡಿಲ್ಲವೆಂದು ಹೇಳುವ ತಜ್ಞರು ಸಾಮಾನ್ಯವಾಗಿ ವಿಮಾನದ ಟಯರುಗಳು ಕಾರಿನ ಟಯರುಗಳಿಗಿಂತ ಏಳು ಪಟ್ಟು ಅಧಿಕ ಒತ್ತಡ ಸಹಿಸುವ ಶಕ್ತಿ ಹೊಂದಿರುತ್ತವೆ. ಆದರೂ ಅವುಗಳ ಪ್ರೆಶರ್ ಕಡಿಮೆಯಾದಾಗ ಆವುಗಳು ಚಪ್ಪಟೆಯಾಗುತ್ತವೆ ಎಂದು ವಿಮಾನದ ಕ್ಯಾಪ್ಟನ್ ಒಬ್ಬರು ಮಾಹಿತಿ ನೀಡಿದ್ದಾರೆ.
ಏರ್ ಬಸ್ ಎ 389 ಡಬಲ್ ಡೆಕ್ ನಾಲ್ಕು ಇಂಜಿನಿನ ಜೆಟ್ ಆಗಿದ್ದು ವಿಶ್ವದ ಅತ್ಯಂತ ದೊಡ್ಡ ಪ್ಯಾಸೆಂಜರ್ ಏರ್ ಲೈನ್ ಸಂಸ್ಥೆಯ ಈ ವಿಮಾನ ಒಟ್ಟು 525 ಪ್ರಯಾಣಿಕರನ್ನು ಏಕ ಕಾಲದಲ್ಲಿ ಮೂರು ದರ್ಜೆ ಪ್ರಯಾಣ ಮಾದರಿಯಲ್ಲಿ ಸಾಗಿಸಬಹುದಾಗಿದ್ದು, ಇಕಾನಮಿ ಕ್ಲಾಸ್ ಆಗಿದ್ದಲ್ಲಿ ಒಟ್ಟು 853 ಪ್ರಯಾಣಿಕರನ್ನು ಏಕಕಾಲದಲ್ಲಿ ಸಾಗಿಸಬಹುದಾಗಿದೆ.