×
Ad

ಚೀನ: ಮಗಳ ಮದುವೆಯಂದೇ ಪತಿಯ ಒಳ ಉಡುಪಿಗೆ ವಿಶವಸ್ತುವನ್ನು ಲೇಪಿಸಿದ ಪತ್ನಿ!

Update: 2016-05-11 13:08 IST

ಪೆಯಿಚಿಂಗ್, ಮೇ 11: ಚೀನದ ವ್ಯಕ್ತಿಯೊಬ್ಬನ ಗುಪ್ತಾಂಗ ಮಗಳ ಮದುವೆ ಉರಿಯತೊಡಗಿದಾಗ ಆತ ತಬ್ಬಿಬ್ಬಾಗಿದ್ದ. ಈ ವ್ಯಕ್ತಿಯ ಗುಪ್ತಾಂಗ ಉರಿಯುತ್ತಿದ್ದುದಲ್ಲದೆೆ ಆತ ಉಸಿರಾಟದ ಸಮಸ್ಯೆಯನ್ನು ಎದುರಿಸತೊಡಗಿದ್ದನು. ವೈದ್ಯರು ಪರೀಕ್ಷೆ ನಡೆಸಿದಾಗ ಅವನ ಒಳ ಉಡುಪನ್ನು ವಿಷವಸ್ತುಗಳಿಂದ ಒದ್ದೆ ಮಾಡಲಾಗಿದ್ದ ವಿಷಯ ಬಹಿರಂಗವಾಗಿತ್ತು. ಪೆರ್‌ಕೆಟ್ ಟಾಕ್ಸಿನ್ ಎಂಬ ಬಹಳ ಅಪಾಯಕಾರಿ ವಿಷವಸ್ತುವಿನಿಂದ ಆತನ ಒಳ ಉಡುಪಿನಿಂದ ತೋಯಿಸಲಾಗಿತ್ತು. ಪೆರ್‌ಕೆಟ್ ಟಾಕ್ಸಿನ್‌ನ್ನು ಚೀನಾದಲ್ಲಿ ಸಾಮಾನ್ಯವಾಗಿ ಕಳೆ ನಾಶಕವಾಗಿ ಉಪಯೋಗಿಸಲಾಗುತ್ತದೆ

ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ ಮರಣದ ನಡುವೆ ಹೊಯ್ದೆಟ ನಡೆಸಿದ ಈ ವ್ಯಕ್ತಿಯ ಹೆಸರು ಜ್ಯಾಂಗ್ ಎಂದಾಗಿದೆ. ಅವನ ಪತ್ನಿ ಅವನ ಒಳಉಡುಪನ್ನು ಪೆರ್‌ಕೆಟ್ ಎಂಬ ಕಳೆನಾಶಕ ವಿಶವಸ್ತುವಿನಿಂದ ಒದ್ದೆ ಮಾಡಿ ಧರಿಸಲು ಕೊಟ್ಟ ಪರಿಣಾಮ ಅವನ ಗುಪ್ತಾಂಗಕ್ಕೆ ತೀವ್ರ ಹಾನಿಯಾಗಿತ್ತು. ಹೀಗೆ ಒದ್ದೆ ಮಾಡಿದ್ದ ಒಳ ಉಡುಪನ್ನು ಮಗಳ ಮದುವೆಯ ದಿವಸದಂದೇ ಧರಿಸಲು ಪತಿಗೆ ಅವಳು ನೀಡಿದ್ದಳು. ವಿಶವಸ್ತು ಬಹಳ ವೇಗದಿಂದ ಹರಡಿ ಅವನ ಗುಪ್ತಾಂಗಕ್ಕೆ ಹಾನಿ ಮಾಡಿತ್ತು. ಅದರಿಂದ ಎಷ್ಟು ಕೆಟ್ಟ ಪರಿಣಾಮವಾಗಿತ್ತೆಂದರೆ ಆತನ ಶರೀರದ ಕೆಳಭಾಗಕ್ಕೂ ತೀವ್ರ ಹಾನಿ ಆಗಿದೆ. ಪೊಲೀಸರು ಈಗ ಜ್ಯಾಂಗ್‌ನ ಪತ್ನಿಯನ್ನು ಬಂಧಿಸಿ ಪ್ರಶ್ನಿಸುತ್ತಿದ್ದಾರೆ. ಈವರೆಗೂ ಅವನ ಪತ್ನಿ ಹಾಗೆ ಯಾಕೆ ಮಾಡಿದ್ದಳೆಂದು ಈವರೆಗೂ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News