ಮೇ 12ರಿಂದ ಚಿತ್ತಾರ ಬೇಸಿಗೆ ಶಿಬಿರದ ಪಂಚಮ ಸಂಭ್ರಮ

Update: 2016-05-11 13:41 GMT

ಮಂಗಳೂರು, ಮೇ 11: ನಗರದ ಆಕಾಶಭವನದ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ನಡೆಯುತ್ತಿರುವ ಐದನೆ ವರ್ಷದ ಬೇಸಿಗೆ ಶಿಬಿರ ಪಂಚಮ ಸಂಭ್ರಮ ಮೇ 12ರಿಂದ ಆಕಾಶಭವನದ ಅಂಗನವಾಡಿ ಕೇಂದ್ರದಲ್ಲಿ ಆರಂಭವಾಗಲಿದೆ.

ಐದು ದಿನಗಳ ಈ ಶಿಬಿರದಲ್ಲಿ ಆಕಾಶಭವನ, ನಂದನಪುರ, ಆನಂದನಗರ ಮತ್ತು ಮುಲ್ಲಕಾಡಿನ ಸುಮಾರು 100ಕ್ಕೂ ಹೆಚ್ಚು ಚಿಣ್ಣರು ಭಾಗವಹಿಸುತ್ತಿದ್ದಾರೆ. ಆವೆ ಮಣ್ಣಿನ ಆಕೃತಿ, ಮರಳು ಶಿಲ್ಪ, ಗಾಳಿಪಟ, ಚಿತ್ರಕತೆ, ಅಂದದ ಕೈಬರಹ, ವ್ಯಕ್ತಿತ್ವ ವಿಕಸನ, ಸರಳ ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಹೆಸರಾಂತ ಕಲಾವಿದರಾದ ಕುದ್ರೋಳಿ ಗಣೇಶ್, ಕೆ.ಕೆ. ಪೇಜಾವರ, ಮೈಮ್ ರಾಮದಾಸ್, ಪ್ರೇಮನಾಥ ಮರ್ಣೆ, ಅಕ್ಷತಾ ಕುಡ್ಲ, ಶೋಭಾ ಮಸ್ಕರೇನಸ್ ಮೊದಲಾದವರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಶಿಬಿರದ ಮುಕ್ತಾಯದ ಬಳಿಕ ಒಂದು ದಿನ ಪಿಲಿಕುಳ ನಿಸರ್ಗಧಾಮ, ವಿಜ್ಞಾನ ಕೇಂದ್ರ ಮತ್ತು ಗುತ್ತಿನ ಮನೆಗೆ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಶಿಬಿರದ ಮಕ್ಕಳಿಗೆ ಉಚಿತ ಪ್ರವೇಶ ಎಂದು ಸಂಘಟಕರು ಹೇಳಿದ್ದಾರೆ.


ಪರಿಸರ ಕುರಿತ ಚಿತ್ರಬಿಡಿಸುವ ಸ್ಪರ್ಧೆ

ಪಂಚಮ ಸಂಭ್ರಮದ ನೆನಪಿನಲ್ಲಿ ಮಂಗಳೂರು ನಗರದ ಚಿಣ್ಣರಿಗೆ ಪರಿಸರದ ಕುರಿತು ಚಿತ್ರಬಿಡಿಸುವ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಪರಿಸರದ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಮಂಗಳೂರು ಕದ್ರಿ ಪಾರ್ಕ್‌ನಲ್ಲಿ ಮೇ 15ರಂದು ಈ ಕಾರ್ಯಕ್ರಮ ನಡೆಯಲಿದೆ.

ನಗರದ ಎಲ್ಲ ಮಕ್ಕಳಿಗೆ ಸ್ಪರ್ಧೆಗೆ ಮುಕ್ತ ಆಹ್ವಾನವಿದೆ. ಭಾಗವಹಿಸುವ ಎಲ್ಲ ಮಕ್ಕಳು ಕಲರ್ ಹಾಗೂ ಇತರ ಸಾಮಗ್ರಿಗಳನ್ನು ತರಬೇಕು. ಉಳಿದಂತೆ ಸ್ಪರ್ಧೆಗೆ ಬೇಕಾದ ಡ್ರಾಯಿಂಗ್ ಪೇಪರ್ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News