‘ವೆಸ್ಟ್‌ಗೇಟ್ ವೆನೆಝಿಯಾ’ ವಸತಿ ಸಮುಚ್ಚಯ ಉದ್ಘಾಟನೆ

Update: 2016-05-11 18:24 GMT

ಮಂಗಳೂರು, ಮೇ 11: ಎಸ್‌ಎಂಆರ್ ಗ್ರೂಪ್‌ನಿಂದ ಕಂಕನಾಡಿ ಬಳಿಯ ಗೋರಿಗುಡ್ಡದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ವೆಸ್ಟ್‌ಗೇಟ್ ವೆನೆಝಿಯಾ’ ವಸತಿ ಸಮುಚ್ಚಯ ಇಂದು ಸಂಜೆ ಉದ್ಘಾಟನೆಗೊಂಡಿತು.

ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ನೂತನ ಸಮುಚ್ಚಯವನ್ನು ಉದ್ಘಾಟಿಸಿದರು. ಈ ಸಂದರ್ಭ ಎಸ್‌ಎಂಆರ್ ಗ್ರೂಪ್‌ನ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಫ್ಲಾಟ್ ಖರೀದಿಸಿದವರಿಗೆ ಕೀಲಿಕೈ ಹಸ್ತಾಂತರಿಸಿದರು.

ಎಸ್‌ಎಂಆರ್‌ನ ನಿರ್ದೇಶಕ ರಿಫಾತ್ ಅಹ್ಮದ್, ಯೆನೆಪೊಯ ವಿವಿ ಕುಲಪತಿ ವೈ. ಅಬ್ದುಲ್ಲಾ ಕುಂಞಿ, ಚಂದ್ರಗಿರಿ ಕನ್‌ಸ್ಟ್ರಕ್ಷನ್‌ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಶರೀಫ್, ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ಮಿಸ್ಬಾಹ್ ನಾಲೆಜ್ ಫೌಂಡೇಶನ್‌ನ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ, ಎಚ್.ಎಚ್.ಗ್ರೂಪ್‌ನ ಕುಂಞಿ ಅಹ್ಮದ್, ಎ.ಕೆ. ಗ್ರೂಪ್ ಅಧ್ಯಕ್ಷ ಎ.ಕೆ. ಅಹ್ಮದ್, ಬಾವ ಫಿಶ್‌ಮಿಲ್‌ನ ಪಾಲುದಾರ ಜೋಹರ್ ಬಾವ, ಆರ್ಕಿಟೆಕ್ಟ್ ದಾಮೋದರ ಶೆಣೈ, ಜಿಪಂ ಸದಸ್ಯ ಶಾಹುಲ್ ಹಮೀದ್, ಆಲನ್ ಸೋನ್ಸ್, ಸ್ಯಾಮ್‌ಸನ್ ಗೋನ್ಸಾಲೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News