×
Ad

ಮೇ 14ರಂದು ಉಪ್ಪಿನಂಗಡಿಯಲ್ಲಿ ಪೊಲೀಸ್ ಜನಸಂಪರ್ಕ ಸಭೆ

Update: 2016-05-12 14:05 IST

ಉಪ್ಪಿನಂಗಡಿ, ಮೇ 12: ಪೊಲೀಸ್ ಜನಸಂಪರ್ಕ ಸಭೆಯು ಮೇ 14ರಂದು ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಜನಸಂಪರ್ಕ ಸಭೆ ಇದಾಗಿದ್ದು, ಬೆಳಗ್ಗೆ 10ರಿಂದ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಪ್ರೊಬೆಷನರಿ ಎಎಸ್ಪಿಲಕ್ಷ್ಮಣ್ ನಿಂಬರ್ಗಿ ವಹಿಸಲಿದ್ದಾರೆ. ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯ ಅನುಷ್ಠಾನಗಳ ಮಾಹಿತಿ ಹಾಗೂ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ಸಾರ್ವಜನಿಕ ದೂರುಗಳಿದ್ದಲ್ಲಿ ಮುಂಚಿತವಾಗಿ ಲಿಖಿತವಾಗಿ ನೀಡಬಹುದು ಅಥವಾ ಸಭೆಯಲ್ಲಿಯೂ ತಿಳಿಸಬಹುದು. ಸಭೆಗೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುವಂತೆ ಪ್ರಕಟನೆೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News