ಪುತ್ತೂರು: ಅಳಿಯಂದಿರಿಂದ ಮಾವನಿಗೆ ಹಲ್ಲೆ
ಪುತ್ತೂರು, ಮೇ 12: ಅಗತ್ಯ ವಿಷಯ ಮಾತನಾಡಲು ಇದೆ ಎಂದು ಹೇಳಿ ಮನೆಗೆ ಕರೆಸಿಕೊಂಡು ತಂಡವೊಂದು ವ್ಯಕ್ತಿಗೆ ಹಲ್ಲೆ ನಡೆಸಿರುವ ಘಟನೆ ಬುಧವಾರ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಪುಣ್ಚಪ್ಪಾಡಿ ಎಂಬಲ್ಲಿ ನಡೆದಿದ್ದು, ಗಾಯಾಳು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುತ್ತೂರು ತಾಲೂಕಿನ ಸವಣೂರು ಗ್ರಾಮದ ದೋಳ್ಪಾಡಿ ಚಾರ್ವಾಕ ಕಲಂಜೋಡಿ ರುಕ್ಮಯ್ಯ ಎಂಬವರ ಪುತ್ರ ಲಿಂಗಪ್ಪ(31) ಹಲ್ಲೆಗೊಳಗಾದವರು.
ಕಳೆದು ಒಂದು ವಾರದಿಂದ ನಮಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ನಾವು ನನ್ನ ತವರು ಮನೆ ಸವಣೂರು ಪುಣ್ಚಪ್ಪಾಡಿಯಲ್ಲಿ ಕಳೆದ ಒಂದು ವಾರದಿಂದ ವಾಸವಾಗಿದ್ದೇವೆ. ಬುಧವಾರ ಮನೆಗೆ ತನ್ನ ಪತಿಂು ಅಕ್ಕನ ಮಕ್ಕಳಾದ ಪ್ರದೀಪ್ ಹಾಗೂ ಸುಧೀರ್ ಮತ್ತಿಬ್ಬರ ಜೊತೆ ಆಗಮಿಸಿ ಮಾವನಲ್ಲಿ ಅಗತ್ಯ ವಿಷಯ ಮಾತನಾಡಲು ಇದೆ ಎಂದು ಹೇಳಿ ಅವರನ್ನು ಮನೆಗೆ ಕರೆಸುವಂತೆ ತಿಳಿಸಿದ್ದರು. ಈ ಬಗ್ಗೆ ನಾನು ಪತಿಗೆ ಫೋನ್ ಮಾಡಿ ಬರುವಂತೆ ತಿಳಿಸಿದ್ದೇನೆ. ಅವರು ಮನಗೆ ಬಂದ ಕೂಡಲೇ ಅವರು ನಾಲ್ವರು ಏನೂ ವಿಚಾರಿಸದೇ ಏಕಾಏಕಿ ಕಬ್ಬಿಣದ ರಾಡ್‌ನಿಂದ ನನ್ನ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಲಿಂಗಪ್ಪರ ಪತ್ನಿ ಚಿತ್ರಾ ಆರೋಪಿಸಿದ್ದಾರೆ.