ಕಾಸರಗೋಡು ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ ಹೀಗಿದೆ...
ಕಾಸರಗೋಡು, ಮೇ 12: ಕೇರಳ ವಿಧಾನಸಭಾ ಚುನಾವಣೆಗೆ ದಿನಗಳು ಇನ್ನು ಮಾತ್ರ ಉಳಿದಿದ್ದು, ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರಕ್ಕಿಂತ ಮನೆಮನೆ ಭೇಟಿಗೆ ಹೆಚ್ಚು ಒತ್ತು ನೀಡುತ್ತಿವೆ.
ಫ್ಲೆಕ್ಸ್, ಬ್ಯಾನರ್‌ಗಳ ಮೂಲಕ ಅಬ್ಬರದ ಪ್ರಚಾರ ಕಂಡುಬರುತ್ತಿಲ್ಲ. ಸದ್ದಿಲ್ಲದೆ ಬಿರುಸಿನಿಂದ ಚುನಾವಣಾ ಪ್ರಚಾರ ಮುಂದುವರಿದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪ್ರತಿಪಕ್ಷ ನಾಯಕ ವಿ.ಎಸ್.ಅಚ್ಯುತಾನಂದನ್ ಅಲ್ಲದೆ ಕೇಂದ್ರ ರಾಜ್ಯ ಸಚಿವರು, ಪ್ರಮುಖ ನಾಯಕರು ಪ್ರಚಾರ ನಡೆಸುವ ಮೂಲಕ ಮತದಾರರ ಮನೆಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.
ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದ್ದು, ಈ ಪೈಕಿ ಮಂಜೇಶ್ವರ ಮತ್ತು ಕಾಸರಗೋಡು ಫಲಿತಾಂಶ ತೀವ್ರ ಕುತೂಹಲಕಾರಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಇಲ್ಲಿ ಇಲ್ಲಿ ಐಕ್ಯರಂಗ, ಎಡರಂಗ ಹಾಗೂ ಬಿಜೆಪಿ ನಡುವೆ ತ್ರೀಕೋನ ಸ್ಪರ್ಧೆ ಎದ್ದು ಕಾಣುತ್ತಿದೆ. ಉದುಮ, ಕಾಞಂಗಾಡ್, ತ್ರಿಕ್ಕರಿಪುರದಲ್ಲಿ ಐಕ್ಯರಂಗ ಮತ್ತು ಎಡರಂಗ ನಡುವೆ ನೇರ ಹಣಾಹಣಿಯ ನಿರೀಕ್ಷೆಯಿದ್ದು, ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಷ್ಟೇನೂ ಬಲಿಷ್ಠವಾಗಿಲ್ಲ.
ಕಾಸರಗೋಡು ವಿಧಾನ ಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ 1987ರಿಂದ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಆದರೆ ಗೆಲ್ಲಲು ಸಾಧ್ಯವಾಗಿಲ್ಲ. ಕನ್ನಡ ಭಾಷಾ ಅಲ್ಪಸಂಖ್ಯಾತರೇ ನಿರ್ಣಾಯಕ ಪಾತ್ರವಹಿಸುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಮೂಲಕ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಘಟಕ ಪಕ್ಷವಾದ ಮುಸ್ಲಿಂ ಲೀಗ್‌ನ ಹಾಲಿ ಶಾಸಕ ಪಿ.ಬಿ.ಅಬ್ದುರ್ರಝಾಕ್, ಎಲ್‌ಡಿಎಫ್ ಅಭ್ಯರ್ಥಿಯಾಗಿ ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯಾಕಾರಿ ಸಮಿತಿ ಸದಸ್ಯ.ಸಿ.ಎಚ್.ಕುಂಞಂಬು ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಕಣದಲ್ಲಿದ್ದಾರೆ.
ಕನ್ನಡಿಗರೇ ನಿರ್ಣಾಯಕ
ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಭಾಷಾ ಅಲ್ಪಸಂಖ್ಯಾತರ ನಿರಂತರ ಅವಗಣನೆಗೆ ಉತ್ತರ ಲಭಿಸಲಿದೆ. ಕೇರಳ ಸರಕಾರದ ಮಂಡಿದ 2015ರ ಮಲಯಾಳ ಕಾಯ್ದೆಯೊಂದಿಗೆ ಜಿಲ್ಲೆಯಲ್ಲಿರುವ ಭಾಷಾ ಅಲ್ಪಸಂಖ್ಯಾತರಿಗೆ ಯಾವುದೇ ಭದ್ರತೆಯಿಲ್ಲದಂತಾಗಿದೆ. ಭಾಷಾ ಅಲ್ಪಸಂಖ್ಯಾತರ ಸಂವಿಧಾನದತ್ತ ಹಕ್ಕು ಸಂರಕ್ಷಣೆಗಾಗಿ ಯಾವ ನಾಯಕರೂ ಧ್ವನಿ ಎತ್ತಲಿಲ್ಲ ಎಂಬುದು ಕನ್ನಡಿಗರ ಅಳಲು. ಇವೆಲ್ಲವೂ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಕಳೆದ ಬಾರಿ ಶೇ.75.14 ಮತದಾನ
2011ರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 1,76,801 ಮತದಾರರ ಪೈಕಿ 1,32,847 ಮಂದಿ ಮತ ಚಲಾಯಿಸಿದ್ದರು. ಶೇ. 75.14 ಮತದಾನವಾಗಿತ್ತು. ಕಳೆದ ಬಾರಿ 10 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಮುಸ್ಲಿಮ್ ಲೀಗ್ ಅಭ್ಯರ್ಥಿ ಪಿ.ಬಿ.ಅಬ್ದುರ್ರಝಾಕ್ 49,817 ಮತಗಳನ್ನು ಪಡೆದು ಆಯ್ಕೆಯಾದರೆ, ಬಿಜೆಪಿಯ ಕೆ.ಸುರೇಂದ್ರನ್ 43,989 ಮತಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದರು. ಸಿಪಿಎಂನ ಸಿ.ಎಚ್.ಕುಂಞಂಬು 35,067 ಮತಗಳನ್ನು ಮಾತ್ರ ಗಳಿಸಿದ್ದರು. ಉಳಿದಂತೆ ಬಿಎಸ್ಪಿಯ ಅಬ್ದುಲ್ ಮಜೀದ್ 869, ಸ್ವತಂತ್ರ ಅಭ್ಯರ್ಥಿಗಳಾದ ಅಫ್ಸಾ ಮುನೀರ್ 1076, ಅಬ್ದುಲ್ಲ ಟಿಂಬರ್ 547, ಕುಂಞಂಬು 490, ಅಬ್ದುರ್ರಝಾಕ್ ಕೆ.465, ಅಬ್ಬಾಸ್ ಎಂ. 391 ಹಾಗೂ ಅಬ್ದುಲ್ಲ ಪಿ.ಎಂ. 262 ಮತಗಳನ್ನು ಪಡೆದುಕೊಂಡಿದ್ದರು.
-------------------------------
ಕಾಸರಗೋಡು ವಿಧಾನಸಭಾ ಕ್ಷೇತ್ರ
ಕಳೆದ ಐದು ವರ್ಷಗಳಲ್ಲಿ ಯುಡಿಎಫ್‌ನ ಸಾಧನೆ ಹಾಗೂ ವಿಧಾನಸಭೆಯ ಸಾಧನೆಯನ್ನು ಮುಂದಿಟ್ಟುಕೊಂಡು ಯುಡಿಎಫ್‌ಮತಯಾಚಿಸಿದರೆ, ಜಿಲ್ಲೆಯ ಹಿಂದುಳಿದವಸ್ಥೆ, ಕುಡಿಯುವ ನೀರು ಸಮಸ್ಯೆ, ಕೇಂದ್ರ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಇದೇ ವೇಳೆ ಐಎನ್‌ಎಲ್ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನಿಲುವನ್ನು ಜನರ ಮುಂದಿಟ್ಟು ಮತಯಾಚಿಸುತ್ತಿದೆ.
ಅತ್ಯಧಿಕ ಬಾರಿ ಶಾಸಕ
ಈ ಕ್ಷೇತ್ರದಿಂದ ಅತ್ಯಕ ಬಾರಿ ಶಾಸಕರಾದ ಹೆಗ್ಗಳಿಕೆ ಸಿ.ಟಿ.ಅಹ್ಮದಲಿಯವರದ್ದು, ಇಲ್ಲಿ ಬಿಜೆಪಿ ಮುಸ್ಲಿಂ ಲೀಗ್‌ನ ಎದುರಾಳಿಯಾಗಿದೆ. 1982ರಲ್ಲಿ ಬಿಜೆಪಿಯ ಎಂ.ನಾರಾಯಣ ಭಟ್‌ರನ್ನು 8,019 ಮತಗಳಿಗೆ, 1987ರಲ್ಲಿ ಶ್ರೀಕೃಷ್ಣ ಭಟ್‌ರನ್ನು 14,874 ಮತಗಳಿಗೆ, 1996ರಲ್ಲಿ ಕೆ. ಮಾಧವ ಹೇರಳಯವರನ್ನು 3,783 ಮತಗಳಿಗೆ, 2001ರಲ್ಲಿ ಪಿ.ಕೆ.ಕೃಷ್ಣದಾಸ್ 17,995 ಮತಗಳಿಗೆ, 2006ರಲ್ಲಿ ವಿ.ರವೀಂದ್ರನ್‌ರನ್ನು 10,342 ಮತಗಳಿಗೆ ಪರಾಜಯಗೊಳಿಸಿ ಸಿ.ಟಿ. ಅಹ್ಮದಲಿ ಗೆಲುವು ಸಾಸಿದ್ದರು. ಕಳೆದ ಬಾರಿ ಮುಸ್ಲಿಮ್ ಲೀಗ್‌ನ ಎನ್.ಎ.ನೆಲ್ಲಿಕುನ್ನು 9,738 ಮತಗಳ ಅಂತರದಿಂದ ಬಿಜೆಪಿಯ ಜಯಲಕ್ಷ್ಮೀ ಎನ್. ಭಟ್‌ರನ್ನು ಪರಾಜಯಗೊಳಿಸಿದ್ದರು.
-------------------------------
ಉದುಮ ವಿಧಾನಸಭಾ ಕ್ಷೇತ್ರ
-------------------------------
ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರ
ಕಳೆದ ಎರಡು ಚುನಾವಣೆಯಲ್ಲಿ ಸಿಪಿಎಂ ಮತಗಳಿಕೆಯಲ್ಲಿ ಕುಸಿತ ಕಂಡಿದೆ. 2011ರ ವಿಧಾನಸಭಾ ಚುನಾವಣೆಯಲ್ಲಿ 8 ಸಾವಿರದಷ್ಟು ಮತಗಳ ಮುನ್ನಡೆ ಸಾಧಿಸಿದ್ದ ಸಿಪಿಎಂ 2014ರ ಲೋಕಸಭಾ ಚುನಾವಣೆಯನ್ನು ಅವಲೋಕಿಸಿದಾಗ ಈ ಸಂಖ್ಯೆ 3 ಸಾವಿರಕ್ಕೆ ಕುಸಿದಿದೆ.
ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಕೊನೆಯ ವಿಧಾನಸಭಾ ಕ್ಷೇತ್ರವಾಗಿದೆ ತ್ರಿಕ್ಕರಿಪುರ ಕ್ಷೇತ್ರ. ಕಮ್ಯೂನಿಸ್ಟ್ ಹುತಾತ್ಮರ ನಾಡು. ಕಯ್ಯೂರು, ಕರಿವೆಳ್ಳೂರು, ಉದಿನೂರು ಎಲ್ಲವೂ ತ್ರಿಕ್ಕರೀಪುರದ ಇತಿಹಾಸ ಪುಟದಲ್ಲಿ ಕಮ್ಯೂನಿಸ್ಟರ ಹೋರಾಟದ ಸಂಕೇತವಾಗಿದೆ. ಇ.ಕೆ.ನಾಯನಾರ್‌ರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿದ ಕ್ಷೇತ್ರ ಇದಾಗಿದ್ದು, ಇಲ್ಲಿ ಈ ತನಕ ಸಿಪಿಎಂ ಮಾತ್ರ ಗೆದ್ದಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ತ್ರಿಕ್ಕರೀಪುರ ಕ್ಷೇತ್ರದಿಂದ ಎಡರಂಗದ ಅಭ್ಯರ್ಥಿಗೆ ಲಭಿಸಿದ ಬಹುಮತ ಕೇವಲ 3,451 ಮಾತ್ರ. ಈ ಲೆಕ್ಕಾಚಾರದ ಮೇಲೆ ಕಣ್ಣಿಟ್ಟು ಐಕ್ಯರಂಗ ಕೆ.ಪಿ.ಕುಂಞಿಕಣ್ಣನ್‌ರನ್ನು ಕಣಕ್ಕಿಳಿಸುವ ಮೂಲಕ ಐಕ್ಯರಂಗ ಕ್ಷೇತ್ರದ ಮೊದಲ ವಿಜಯ ಸಾಧಿಸಲು ತಯಾರಿ ನಡೆಸಿದೆ.