ಆಳ್ವಾಸ್‌ನ ಸೈಯದ್ ಸಲ್ಮತ್ ಅಜಿಲಾನ್‌ಗೆ 2 ಚಿನ್ನದ ಪದಕ
ಮೂಡುಬಿದಿರೆ, ಮೇ 12: ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪೆರಡೇನಿಯಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಮೇ 8ರಂದು ನಡೆದ 14ನೆ ಅಂತಾರಾಷ್ಟ್ರೀಯ ಟೆನ್ಶಿನ್‌ಕಪ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಸೈಯದ್ ಸಲ್ಮತ್ ಅಜಿಲಾನ್ ಪ್ರಥಮ ಸ್ಥಾನ ಪಡೆದಿದ್ದು 2 ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಕರಾಟೆಯ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಎದುರಾಳಿ ಕತಾರ್, ನೇಪಾಳ, ಶ್ರೀಲಂಕಾ, ಜಪಾನ್‌ನ ತಂಡದ ಕರಾಟೆ ಪಟುಗಳ ವಿರುದ್ಧ ಜಯಗಳಿಸಿದ ಅಜಿಲಾನ್, 2014ರಲ್ಲಿ ಮಧ್ಯಪ್ರದೇಶದ ಬೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ವರ್ಷ ಮಲೇಷಿಯಾದಲ್ಲಿ ಜರಗಲಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಅವರು ಭಾಗವಹಿಸಲಿದ್ದಾರೆ.
ಶೋರಿನ್ ರಿಯೋ ಕರಾಟೆ ಅಸೋಶಿಯೇಶನ್‌ನ ನದೀಮ್ ಹಾಗೂ ಸರ್ಫರಾಝ್‌ರ ಶಿಷ್ಯರಾಗಿರುವ ಇವರು ಹೊಸ್ಮಾರಿನ ಸೈಯದ್ ಅಬೂಬಕರ್ ಹಾಗೂ ಮೈಮುನಾ ದಂಪತಿಯ ಪುತ್ರ.