ಕೇರಳವನ್ನು ತೆಗಳಲು ಮೋದಿಗೆ ನೈತಿಕತೆಯಿಲ್ಲ: ಚೆರ್ಕಳಂ ಅಬ್ದುಲ್ಲ

Update: 2016-05-12 14:03 GMT

ಮಂಜೇಶ್ವರ, ಮೇ 12: ದೇವರ ಸ್ವಂತ ನಾಡೆಂಬ ಖ್ಯಾತಿಯಿರುವ ಕೇರಳವನ್ನು ರಾಷ್ಟ್ರದ ಪ್ರಧಾನಮಂತ್ರಿ ಕೀಳುಮಟ್ಟದ ರಾಜಕೀಯ ಮೂಲಕ ತೆಗಳಿರುವುದು ಅವರ ಸಂಸ್ಕೃತಿಯ ನೈಜ ಮುಖವನ್ನು ಬಿಂಬಿಸಿದೆ. ಸೋಮಾಲಿಯಾ ದೇಶವನ್ನು ಬಿಂಬಿಸಿ ಕೇರಳವನ್ನು ತೆಗಳುವ ನೈತಿಕತೆ ಮೋದಿಗಿಲ್ಲ. ಗುಜರಾತಿಗಿಂತ ಸಾಮೂಹಿಕ, ಸಾಂಸ್ಕೃತಿಕ, ವಿದ್ಯಾಭ್ಯಾಸ, ಆರೋಗ್ಯ ಕ್ಷೇತ್ರಗಳಲ್ಲಿ ಕೇರಳ ಮುಂದಿದೆಯೆಂಬುದನ್ನು ಕೇಂದ್ರ ಸರಕಾರವೇ ಹೊರತಂದ ಅಂಕಿಅಂಶಗಳು ತೋರಿಸಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅರಿವಿದ್ದೂ ಮೋದಿಯವರು ತುಟಿ ಮೀರಿ ಮಾತನಾಡಿರುವುದು ಖಂಡನಾರ್ಹ ಎಂದು ಯುಡಿಎಫ್‌ನ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಟೀಕಿಸಿದ್ದಾರೆ.

ಯುಡಿಎಫ್ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಪ್ರಚಾರಾರ್ಥ ದುಬೈ ಕೆಎಂಸಿಸಿ ಸಂಘಟನೆಯ ಸಹಕಾರದೊಂದಿಗೆ ನಡೆಯುತ್ತಿರುವ ಪ್ರಚಾರ ಕಾರ್ಯಕ್ರಮದಂಗವಾಗಿ ಗುರುವಾರ ಉಪ್ಪಳದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಮಂಜೇಶ್ವರ ಹಾಗೂ ಕಾಸರಗೋಡಿನಲ್ಲಿ ಮಾತ್ರ ಬಿಜೆಪಿಯೊಡನೆ ಯುಡಿಎಫ್ ನೇರ ಸ್ಪರ್ಧೆಯಲ್ಲಿದೆ. ಎಡರಂಗ ಮೂರನೆ ಸ್ಥಾನಕ್ಕೆ ಈ ಬಾರಿಯೂ ತಳ್ಳಲ್ಪಡಲಿದೆಯೆಂದು ತಿಳಿಸಿದರು.ಆದರೆ ಜನರನ್ನು ವಂಚಿಸುವ ಹೊಣೆಗೇಡಿ ಹೇಳಿಕೆಗಳಿಂದ ಇರುವ ವರ್ಚಸ್ಸನ್ನೂ ಬಿಜೆಪಿ ಕಳೆದುಕೊಂಡಿದೆಯೆಂದು ಕಟಕಿಯಾಡಿದರು.

ಯಹ್ಯಾ ತಂಙಳ್ ಅಧ್ಯಕ್ಷತೆ ವಹಿಸಿದ್ದರು.ಅ್ಯರ್ಥಿ ಪಿ.ಬಿ ಅಬ್ದುರ್ರಝಾಕ್, ಟಿ.ಎ.ಮುನೀರ್ ಚೆರ್ಕಳ, ಎಂ.ಅಬ್ಬಾಸ್, ಮುಹಮ್ಮದ್, ಟಿ.ಆರ್. ಹಮೀದ್, ಎ.ಪಿ.ಹಾಜಿ, ಕೇಶವ ಪ್ರಸಾದ್ ನಾಣಿತ್ತಿಲು, ಎಂ.ಕೆ.ಅಲಿ ಮಾಸ್ಟರ್,ಎ.ಕೆ.ಎಂ.ಅಶ್ರಫ್ ಮೊದಲಾದವರು ಸಭೆಯಲ್ಲಿ ಮಾತನಾಡಿದರು. ಹಂಝ ತೊಟ್ಟಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News