×
Ad

ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಕೈ ಸಿಲುಕಿ ಬಾಲಕನಿಗೆ ಗಾಯ

Update: 2016-05-12 20:41 IST

ಮಂಜೇಶ್ವರ, ಮೇ 12: ಕಬ್ಬಿನ ಹಾಲು ತೆಗೆಯುವ ಯಂತ್ರದ ಚಕ್ರದೆಡೆಗೆ ಬಾಲಕನೋರ್ವನ ಕೈ ಸಿಲುಕಿದ್ದು, ಕಾಸರಗೋಡು ಅಗ್ನಿಶಾಮಕದಳ ನಡೆಸಿದ ಸಕಾಲಿಕ ಕಾರ್ಯಾಚರಣೆಯ ಮೂಲಕ ಬಾಲಕನನ್ನು ರಕ್ಷಿಸಲಾಯಿತು.

ಪಾರೆಕಟ್ಟೆ ಶ್ರೀ ಕೃಷ್ಣ ನಿವಾಸದ ಬಿಜು(15) ನನ್ನು ಅಗ್ನಿಶಾಮಕ ದಳ ರಕ್ಷಿಸಿದೆ.

ಪಾರೆಕಟ್ಟೆ ಪೊಲೀಸ್ ಏರ್‌ಕ್ಯಾಂಪ್ ರಸ್ತೆ ಬಳಿ ಈ ಬಾಲಕನ ಕಬ್ಬಿನ ಜ್ಯೂಸ್ ತೆಗೆಯುವ ಕೇಂದ್ರ ನಡೆಸುತ್ತಿದ್ದು, ಅಲ್ಲಿ ಜ್ಯೂಸ್ ತೆಗೆಯುತ್ತಿದ್ದ ಸಂದಭರ್ದಲ್ಲಿ ಯಂತ್ರದಲ್ಲಿ ಕೈ ಸಿಲುಕಿಕೊಂಡು ತೋಳಿನ ಭಾಗದವರೆಗೆ ನುಸುಳಿತು. ಮಾತ್ರವಲ್ಲ ಮುಖವೂ ಯಂತ್ರಕ್ಕೆ ತಾಗಿ ಗಾಯ ಉಂಟಾಯಿತು. ಅದನ್ನು ಕಂಡ ಪೊಲೀಸರು ಮತ್ತು ಸ್ಥಳೀಯರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಅಗ್ನಿಶಾಮಕ ದಳ ಆಗಮಿಸಿ ಜ್ಯೂಸ್ ಯಂತ್ರದ ಬಿಡಿಭಾಗಗಳನ್ನು ಕಳಚಿ ಬಾಲಕನನ್ನು ರಕ್ಷಿಸಿದರು. ಬಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News