×
Ad

ನಿಧನ

Update: 2016-05-12 23:48 IST

ಡಾ.ಭಾಸ್ಕರ ಡಿ.ಪಾಂಡ್ಯ
ಉಡುಪಿ, ಮೇ 12: ಇಲ್ಲಿನ ಬಡಗುಪೇಟೆಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಾ ಜನಾನುರಾಗಿಗಳಾಗಿದ್ದ ಡಾ.ಭಾಸ್ಕರ ಡಿ. ಪಾಂಡ್ಯ (77) ನಗರದ ತಮ್ಮ ಸ್ವಗೃಹದಲ್ಲಿ ಇಂದು ನಿಧನ ಹೊಂದಿದರು.
ಡಾ.ಪಾಂಡ್ಯ ಪತ್ನಿ, ವೈದ್ಯ ಡಾ.ರಾಜೇಶ್ ಪಾಂಡ್ಯ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಡಾ.ಪಾಂಡ್ಯ ಸುಮಾರು 5 ದಶಕಗಳಿಂದ ಮನೆ ವೈದ್ಯರಂತೆ ಪರಿಸರದ ಜನತೆಗೆ ವೈದ್ಯಕೀಯ ಸೇವೆ ನೀಡಿದ್ದರು. ಕೆಲಕಾಲ ರಥಬೀದಿಯ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದಲ್ಲೂ ಸೇವೆ ಸಲ್ಲಿಸಿದ್ದರು.
1980ರ ದಶಕದಲ್ಲಿ ಉಡುಪಿ ಮಣಿಪಾಲ ರೋಟರಿ ಕ್ಲಬ್‌ನ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಅನೇಕ ಜನಪರ ಯೋಜನೆಯ ರೂವಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News