ಮೇ 16ರಂದು ಮಿಸ್ಬಾಹ್ ಮಹಿಳಾ ಕಾಲೇಜು ಉದ್ಘಾಟನೆ
ಮಂಗಳೂರು, ಮೇ 13: ಕಾಟಿಪಳ್ಳದ ಮಿಸ್ಬಾಹ್ ನಾಲೇಜ್ ಫೌಂಡೇಶನ್ ಅಧೀನದಲ್ಲಿ ‘ಮಿಸ್ಬಾಹ್ ಮಹಿಳಾ ಕಾಲೇಜ’ನ್ನು ಸ್ಥಾಪಿಸಲಾಗಿದ್ದು, ಮೇ 16ರಂದು ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಬಿ.ಎಂ.ಮಮ್ತಾಝ್ ಅಲಿ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಅಪರಾಹ್ನ 3ಕ್ಕೆ ನಡೆಯುವ ಸಮಾರಂಭದಲ್ಲಿ ಅಖಿಲ ಭಾರತ ಮುಸ್ಲಿಮ್ ವಿದ್ವಾಂಸರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ದುಆ ನೆರವೇರಿಸುವರು. ಕಾಲೇಜು ಕಟ್ಟಡದ ನೆಲ ಅಂತಸ್ತನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ದರ್ವೇಶ್ ಸಮೂಹ ಸಂಸ್ಥೆ ಪ್ರಾಯೋಜಿತ ಕಾಲೇಜಿನ ಪ್ರಥಮ ಅಂತಸ್ತು ‘‘ದರ್ವೇಶ್ ಫ್ಯಾಮಿಲಿ ಬ್ಲಾಕ್’ನ್ನು ದುಬೈಯ ಉದ್ಯಮಿ ಅಲ್ಹಾಜ್ ಹಸನ್ ದರ್ವೇಶ್ ಉದ್ಘಾಟಿಸುವರು. ಶಾಸಕ ಬಿ.ಎ.ಮೊಯ್ದಿನ್ ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಿಸ್ಬಾಹ್ ನಾಲೇಜ್ ಫೌಂಡೇಶನ್‌ನ ಟ್ರಸ್ಟಿಗಳಾದ ಕೆ.ಮುಹಮ್ಮದ್ ಹಾರಿಸ್, ಬಿ.ಎ.ನಝೀರ್ ಕೃಷ್ಣಾಪುರ, ಬಿ.ಅಬ್ದುಲ್ ಹಕೀಂ ಫಾಲ್ಕನ್, ಬಿ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಉಪಸ್ಥಿತರಿದ್ದರು.