×
Ad

ತನ್ನ ಆತ್ಮಹತ್ಯೆಯನ್ನು ಮೊಬೈಲ್‌ನಲ್ಲಿ ಚಿತ್ರಿಸುತ್ತಾ ಆ ಹುಡುಗಿ ರೈಲಿನ ಮುಂದೆ ಹಾರಿ ಸತ್ತೇ ಹೋದಳು!

Update: 2016-05-13 18:19 IST

ಹೊಸದಿಲ್ಲಿ, ಮೇ 13: ಫ್ರಾನ್ಸ್ ಹತ್ತೊಂಬತ್ತುವರ್ಷದ ಪೋರಿಯೊಬ್ಬಳು ಸುಮಾರು ಸಾವಿರ ಮಂದಿಯ ಲೈವ್ ವೀಡಿಯೋ ಚ್ಯಾಟ್ ಮಾಡುತ್ತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಯುವತಿಯ ಹೆಸರು ಪೆರಿಸಕೋಪ್ ಎಂದಿದೆ. ಗೆಳೆಯನಿಂದ ಅತ್ಯಾಚಾರಗೊಂಡಿದ್ದೇನೆ, ಆತ ಕೆಟ್ಟದಾಗಿ ವರ್ತಿಸಿದ್ದಾನೆ. ತಾನಿನ್ನು ಬದುಕುವುದಿಲ್ಲ ಎನ್ನುತ್ತಾ ಈ ಹುಡುಗಿ ರೈಲಿನಡಿಗೆ ಹಾರಿ ಸಾವನ್ನಪ್ಪಿದ್ದಾಳೆ. ಈ ಘಟನೆಯಿಂದ ಇಡೀ ಜಗತ್ತೇ ಕಂಪಿಸುವಂತಾಗಿದೆ. ಲೈವಾಗಿ ಮಾತಾಡುತ್ತಾ ವೀಡಿಯೊದಲ್ಲಿ ಮಾತಾಡುತ್ತಿದ್ದಂತೆ ರೈಲಿನನೆದುರು ಜಿಗಿದಿದ್ದಳು. ವೀಡಿಯೊವನ್ನು ಲಕ್ಷಾಂತರ ಮಂದಿ ನೋಡಿದ್ದಾರೆ ಎಂದು ವರದಿಯಾಗಿದೆ.

ವರದಿಯಾಗಿರುವ ಪ್ರಕಾರ ವೀಡಿಯೊದಲ್ಲಿ ಯುವತಿ ಆರಂಭದಲ್ಲಿ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತಾಳೆ. ಅಲ್ಲಿ ಸೋಡಾ ಕುಡಿದು ಸಿಗರೆಟ್ ಸೇದಿ ಸಾವಿರಕ್ಕೂ ಜನರೊಂದಿಗೆ ಪೆರಿಸಕೊಪ್ ಫ್ರೆಂಚ್ ಭಾಷೆಯಲ್ಲಿ ಹರಟುತ್ತಿದ್ದಾಳೆ. ತನ್ನ ಮಾಜಿಗೆಳೆಯನ ಬಗ್ಗೆ ಅವಳು ಮಾತಾಡುತ್ತಿದ್ದಳು. ಸಂಜೆ 4:29ಕ್ಕೆ ರೈಲಿನಡಿಗೆ ಬಿದ್ದು ಸತ್ತಳು. ವೀಡಿಯೊದಲ್ಲಿ ಅಂತಿಮ ಸಮಯದವರೆಗೂ ಅವಳನ್ನು ಆತ್ಮಹತ್ಯೆಯಿಂದ ದೂರವಿರಲು ಜನರು ಆಗ್ರಹಿಸುತ್ತಿದ್ದರು. ಆದರೆ ಅವಳು ಅದಕ್ಕೊಪ್ಪಲು ಸಿದ್ಧಳಾಗಲಿಲ್ಲ. ರೈಲಿನ ಮುಂದೆ ಹಾರಿ ಜೀವತೆತ್ತಳು. ವಿಷಯ ತಿಳಿದು ಘಟನೆ ಸ್ಥಳಕ್ಕೆ ಬಂದಿದ್ದ ಪೊಲೀಸರೇ ಅವಳ ಫೋನ್‌ನ್ನು ಬಂದ್ ಮಾಡಿದರೆಂದು ವರದಿಗಳು ತಿಳಿಸಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News