ಹೇಮಂತ ಕರ್ಕರೆ ಎರಡು ಬಾರಿ ಕೊಲ್ಲಲ್ಪಟ್ಟರು: ರಾಜ್‌ದೀಪ್ ಸರ್ದೇಸಾಯಿ

Update: 2016-05-13 16:27 GMT

ಹೊಸದಿಲ್ಲಿ, ಮೇ 13: 26/11ರ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರದ ಮಾಜಿ ಎಟಿಎಸ್ ಅಧಿಕಾರಿ ಹೇಮಂತ್ ಕರ್ಕರೆ, 26/11ರಂದು ಉಗ್ರರ ಮೂಲಕ ಕೊಲ್ಲಲ್ಪಟ್ಟರೆ ಇದೀಗ ಮತ್ತೆ ನಮ್ಮವರಿಂದಲೇ ಕೊಲ್ಲಲ್ಪಟ್ಟಿದ್ದಾರೆ ಎಂದು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಸಕ್ತ ಬೆಳವಣಿಗೆಗಳ ಕುರಿತಂತೆ ‘ಹೇಮಂತ್ ಕರ್ಕರೆ ಮುಂಬೈ ದಾಳಿಯಲ್ಲಿ ವಿದೇಶಿ ಉಗ್ರರಿಂದ ಒಮ್ಮೆ ಹತರಾದರೆ, ಈಗ ನಮ್ಮವರಿಂದ...’ ಎಂದು ಟ್ವೀಟ್ ಮಾಡಿದ್ದಾರೆ.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಕುರಿತಂತೆ ಮಾಜಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ನಡೆಸಿದ್ದ ತನಿಖೆಯಲ್ಲಿ ಲೋಪವಿದೆ. ಇನ್ನೊಬ್ಬ ಪ್ರಮುಖ ಆರೋಪಿ ಕರ್ನಲ್ ಪ್ರಸಾದ್ ಪುರೋಹಿತ್ ವಿರುದ್ಧ ಸುಳ್ಳು ಸಾಕ್ಷ್ಯ ಪ್ರಸ್ತುತಪಡಿಸಲಾಗಿದೆ ಹಾಗೂ ಸಾಕ್ಷಿಗಳಿಂದ ಬಲವಂತವಾಗಿ ಹೇಳಿಕೆ ಪಡೆಯಲಾಗಿದೆ ಮತ್ತು ಸಾಕ್ಷಿಗಳಿಂದ ಬಲವಂತದ ಹೇಳಿಕೆ ಪಡೆಯಲಾಗಿತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಇದರಿಂದ ಸಾಧ್ವಿ ಪ್ರಜ್ಞಾಸಿಂಗ್ ಸಹಿತ ಪ್ರಮುಖ ಆರೋಪಿಗಳು ಶೀಘ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ರಾಜ್‌ದೀಪ್ ಸರ್ದೇಸಾಯಿಯವರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News