×
Ad

ವರದಕ್ಷಿಣೆ ಕಿರುಕುಳ, ಹಲ್ಲೆ: ಆರೋಪ

Update: 2016-05-13 21:55 IST

ಪುತ್ತೂರು, ಮೇ 13: ವರದಕ್ಷಿಣೆಗಾಗಿ ಪತಿಯೊಬ್ಬ ತನ್ನ ಪತ್ನಿಗೆ ಹಲ್ಲೆ ನಡೆಸಿದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲೂಕಿನ ಕಬಕ ನಿವಾಸಿ ಮೈಮೂದ್ ಎಂಬವರ ಪುತ್ರಿಯನ್ನು ಬೆಳ್ತಂಗಡಿ ತಾಲೂಕಿನ ದೇರಳಕ್ಕಿ ನಿವಾಸಿ ಅಶ್ರಫ್ ಎಂಬಾತ 2015ರಲ್ಲಿ ವಿವಾಹವಾಗಿದ್ದು, ಈ ಸಂದರ್ಭದಲ್ಲಿ ಆತನ ಬೇಡಿಕೆಯಂತೆ 2.5 ಲಕ್ಷ ರೂ. ನಗದು ಹಾಗೂ 30 ಪವನ್ ಚಿನ್ನಾಭರಣ ನೀಡಲಾಗಿತ್ತು. ಬಳಿಕ ಇದೀಗ ಆತ ಹೆಚ್ಚುವರಿ ಹಣಕ್ಕಾಗಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News