×
Ad

ಜಂಟಿ ಪರಿಶೀಲನೆಗೆ ಸಿಸೋಡಿಯ ಆಗ್ರಹ

Update: 2016-05-13 23:39 IST

ಹೊಸದಿಲ್ಲಿ, ಮೇ 13: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆನ್ನಲಾದ ಕಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ವಿಚಾರದಲ್ಲಿ ಹಲವಾರು ಲೋಪದೋಷಗಳು ಎದ್ದು ಕಾಣುತ್ತಿವೆಯೆಂದು ಗುಜರಾತ್ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಒಬ್ಬರು ಹೇಳಿಕೊಂಡಿದ್ದಾರೆ.

ಪ್ರಧಾನಿಯ ಪದವಿಯಲ್ಲಿ ಉಲ್ಲೇಖಿಸಲಾದ ವಿಷಯಗಳನ್ನು ಅವರು ಅಲ್ಲಿ ಕಲಿತಿದ್ದರು ಎನ್ನಲಾದ ಸಮಯದಲ್ಲಿ ವಿಶ್ವವಿದ್ಯಾನಿಲಯದ ಪಠ್ಯದ ಭಾಗವಾಗಿರಲಿಲ್ಲ, ಎಂದು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದ ಜಯಂತಿ ಪಟೇಲ್ ಎಂಬವರು ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಹೇಳಿಕೊಂಡಿದ್ದಾರೆ.
     
 ಮೋದಿ ರಾಜಕೀಯ ಶಾಸ್ತ್ರದಲ್ಲಿ 64 ಅಂಕಗಳು, ಯುರೋಪಿಯನ್ ಹಾಗೂ ಸಾಮಾಜಿಕ ರಾಜಕೀಯ ಚಿಂತನೆಗಳು ವಿಷಯದಲ್ಲಿ 62 ಅಂಕಗಳು, ರಾಜಕೀಯ ಮನಃಶಾಸ್ತ್ರದಲ್ಲಿ 67 ಅಂಕಗಳನ್ನು ತಮ್ಮ ದ್ವಿತೀಯ ವರ್ಷ ಎಂಎ ಪರೀಕ್ಷೆಯಲ್ಲಿ ಪಡೆದಿದ್ದಾರೆ ಎಂದು ಹೇಳಿದ ಇಂಡಿಯನ್ ಎಕ್ಸ್ ಪ್ರೆಸ್ ವರದಿಯೊಂದನ್ನು ಉಲ್ಲೇಖಿಸಿ ಹೇಳಿದ ಪ್ರೊಫೆಸರ್ ಆ ಸಮಯದಲ್ಲಿ ಭಾಗ-2ರಲ್ಲಿ ಈ ವಿಷಯಗಳನ್ನು ಆಂತರಿಕ ಅಥವಾ ಬಾಹ್ಯ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿರಲಿಲ್ಲವೆಂದು ಹೇಳಿದ್ದಾರೆ. ಪಟೇಲ್ ಈ ವಿಶ್ವವಿದ್ಯಾನಿಲಯದಲ್ಲಿ 1969 ರಿಂದ 1983ರ ತನಕ ಸೇವೆ ಸಲ್ಲಿಸಿದ್ದರು. ಆದರೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಮಹೇಶ್ ಪಟೇಲ್ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು ಈ ಅಂಕ ಪಟ್ಟಿಯನ್ನು 30 ವರ್ಷಗಳ ಹಿಂದೆ ತಯಾರಿಸಲಾಗಿದ್ದು ಆ ವಿಷಯಗಳು ಆಗ ವಿವಿಯಲ್ಲಿ ಕಲಿಸಲಾಗುತ್ತಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News