ಸಿಎಂ ‘ಜನಮನ’ದಲ್ಲಿ ಉಡುಪಿಯ ಫಲಾನುಭವಿಗಳು
Update: 2016-05-14 00:10 IST
ಉಡುಪಿ, ಮೇ 13: ರಾಜ್ಯ ಸರಕಾರ 3 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಶುಕ್ರವಾರ ಬೆಂಗಳೂರಿನ ಜಿಕೆವಿಕೆ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಯೋಜನೆಗಳ ಫಲಾನು ಭವಿಗಳೊಂದಿಗೆ ನಡೆಸುವ ಜನಮನ ಸಂವಾದದಲ್ಲಿ ಉಡುಪಿ ಜಿಲ್ಲೆಯ ಫಲಾನುಭವಿಗಳೂ ಭಾಗವಹಿಸಿದ್ದಾರೆ. ಉಡುಪಿಯಿಂದ ಲಲಿತಾ ಪ್ರಭು (ಅನ್ನಭಾಗ್ಯ), ರಜನಿ (ಮನಸ್ವಿನಿ), ಸುಮನಾ (ಕ್ಷೀರಭಾಗ್ಯ), ಸರೋಜಾ (ಪಶುಭಾಗ್ಯ), ನರಸಿಂಹ ಗಾಣಿಗ (ಕೃಷಿಭಾಗ್ಯ), ಕಲಾವತಿ(ವಸತಿಭಾಗ್ಯ), ಭಾಗೀರಥಿ (ವಸತಿ ಭಾಗ್ಯ), ಶಿವಪ್ಪಚವ್ಹಾಣ್(ವಿದ್ಯಾಸಿರಿ), ಪರಮೇಶ್ವರ ಗೌಡ (ವಿದ್ಯಾಸಿರಿ), ಸಂಧ್ಯಾ (ವಿದ್ಯಾಸಿರಿ) ಭಾಗವಹಿಸಿದ್ದಾರೆ.