×
Ad

ಚುನಾವಣೆಗೆ ಮೊದಲೇ ತಮಿಳ್ನಾಡಿನಲ್ಲಿ ರಾಜಕಾರಣಿಗಳ ಅಶ್ಲೀಲ ವೀಡಿಯೊಗಳ ಹಾವಳಿ!

Update: 2016-05-14 12:28 IST

ಚೆನ್ನೈ, ಮೇ 14: ತಮಿಳ್ನಾಡಿನಲ್ಲಿ ಚುನಾವಣೆ ರಂಗೇರುವ ಮೊದಲೇ ತಮಿಳ್ನಾಡು ರಾಜಕಾರಣಿಗಳಲ್ಲಿ ಕೆಲವರ ಅಶ್ಲೀಲ ವೀಡಿಯೊ ಹೊರಗೆ ಬಂದಿದೆ ಎಂದು ವರದಿಯಾಗಿದೆ. ಡರ್ಟಿ ಪಿಕ್ಚರ್ ಎನ್ನುವ ವೀಡಿಯೊಗಳಲ್ಲಿ ರಾಜಕಾರಣಿಗಳ ಖಾಸಗಿತನವನ್ನು ಹರಾಜು ಹಾಕಲಾಗಿದೆ. ಹಲವು ರಾಜಕಾರಣಿಗಳ ಖಾಸಗಿ ಕ್ಷಣಗಳನ್ನು ಸಾರ್ವಜನಿಕಗೊಳಿಸಲಾಗಿದೆ. ಡಿಎಂಕೆ ಅಭ್ಯರ್ಥಿ ಪೆರಿಯ ಕರುಪ್ಪನ್ ಮತ್ತು ಜಗತ್ ರಕ್ಷಗಣ್‌ರನ್ನು ಇಂತಹ ವೀಡಿಯೊಗಳಲ್ಲಿ ತೋರಿಸಲಾಗಿದೆ ಎಂದು ವರದಿಯಾಗಿದೆ.

ವೀಡಿಯೊ ರಿಲೀಸ್ ರಾಜ್ಯ ನಂತರ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಡಿಎಂಕೆ ವಕ್ತಾರ ಸರವಣನ್ ಇಂತಹ ಹೇಸಿಗೆ ರಾಜಕಾರಣವನ್ನು ತಮಿಳ್ನಾಡಿನಲ್ಲಿ ತಾನೀವರೆಗೂ ನೋಡಿಲ್ಲ ಎಂದು ಹೇಳಿದ್ದಾರೆ. ಯಾವುದೋ ಕೆಟ್ಟ ವ್ಯಕ್ತಿಜನರಲ್ಲಿ ತಪ್ಪಾಭಿಪ್ರಾಯ ಮೂಡಿಸಲಿಕ್ಕಾಗಿ ಇಂತಹ ನಕಲಿ ವೀಡಿಯೊಗಳನ್ನು ಸಾರ್ವಜನಿಕಗೊಳಿಸಿದ್ದಾನೆ ಎಂದು ಅಂತಹವನನ್ನು ಪತ್ತೆ ಹಚ್ಚಲಾಗುವುದು ಮತ್ತು ಅವನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಡಿಎಂಕೆ ಇದು ಎಐಡಿಎಂಕೆಯ ಕೆಲಸ ಎಂದು ಸವಾಲು ಹಾಕಿದೆ. ಆದರೆ ಎಐಡಿಎಂಕೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News