ಬಿಹಾರ, ಜಾರ್ಖಂಡ್‌ನಲ್ಲಿ ಇಬ್ಬರು ಪತ್ರಕರ್ತರ ಹತ್ಯೆ
Update: 2016-05-14 13:13 IST
ಜಾರ್ಖಂಡ್/ಬಿಹಾರ,ಮೇ 14: ಕಳೆದ ಗಂಟೆಯೊಳಗೆ ಇಬ್ಬರು ಪತ್ರಕರ್ತರನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಬಿಹಾರ ಮತ್ತು ಜಾರ್ಖಂಡ್ ನಲ್ಲಿ ನಡೆದಿದೆ.
ಬಿಹಾರದ ಹಿರಿಯ ಪತ್ರಕರ್ತ ಮತ್ತು ಜಾರ್ಖಂಡ್ ನಲ್ಲಿ ಸುದ್ದಿ ವಾಹಿನಿಯ ವರದಿಗಾರನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಬಿಹಾರದ ಸಿವಾನ್ ಜಿಲ್ಲೆಯ ಹಿಂದೂಸ್ತಾನ್ ಹಿಂದಿ ದಿನ ಪತ್ರಿಕೆಯ ಜಿಲ್ಲಾ ಮುಖ್ಯಸ್ಥ ರಾಜ್ ದೇವ್ ರಂಜನ್(45) ಮತ್ತು ಜಾರ್ಖಂಡ್ ನಲ್ಲಿ ಸುದ್ದಿವಾಹಿನಿಯ ವರದಿಗಾರ ಅಖಿಲೇಶ್ ಪ್ರತಾಪ್(35) ಗುಂಡೇಟಿಗೆ ಬಲಿಯಾದ ಪತ್ರಕರ್ತರು. ಇವರ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಹಣ್ಣಿನ ಮಾರುಕಟ್ಟೆ ಬಳಿರಾಜ್ ದೇವ್ ರಂಜನ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡುಹಾರಿಸಿ ಹತ್ಯೆ ಮಾಡಿದ್ದಾರೆ. ಜಾರ್ಖಂಡ್ ರಾಜ್ಯದ ಛಾತ್ರಾ ಜಿಲ್ಲೆಯ ದೇವಾರಿಯಾ ಗ್ರಾಮದ ಪಂಚಾಯತ್ ಕಚೇರಿ ಬಳಿ ಸುದ್ದಿವಾಹಿನಿಯ ವರದಿಗಾರ ಅಖಿಲೇಶ್ ಪ್ರತಾಪ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿ ತಿಳಿಸಿದೆ.