×
Ad

15ರಂದು ಕಟ್ಟಡ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರ

Update: 2016-05-14 13:55 IST

ಮಂಗಳೂರು, ಮೇ14: ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ಕ್ರೆಡಯ್ ಆಶ್ರಯದಲ್ಲಿ ಮೇ 15ರಂದು ಕಟ್ಟಡ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರಿಚ್ಚರ್ಡ್ ಕುವೆಲ್ಲೋ, ಕ್ರೆಡಯ್ ಜತೆಗಿನ ಒಪ್ಪಂದ ದ ಮೇರೆಗೆ ಕಟ್ಟಡ ಕಾರ್ಮಿಕ ರಿಗೆ ವೈದ್ಯಕೀಯ ನೆರವು ವರ್ಷ ಪೂರ್ತಿ ಮುಂದುವರಿಯಲಿದೆ ಎಂದರು.

ಶಿಬಿರದಲ್ಲಿ ಉಚಿತ ನೋಂದಣಿ, ತಪಾಸಣೆ ಜತೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುವುದು. ಪ್ರಯೋಗಾಲಯ ಗಳಲ್ಲಿ ಕೆಲವೊಂದು ಪರೀಕ್ಷೆ ಗಳನ್ನು ಉಚಿತ ವಾಗಿ ಹಾಗೂ ಕೆಲ್ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು ಎಂದವರು ಹೇಳಿದರು.

ಶಿಬಿರದಲ್ಲಿ 500 ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬದವರು ಭಾಗವಹಿಸಲಿದ್ದಾರೆ ಎಂದು ಕ್ರೆಡಯ್ ಅಧ್ಯಕ್ಷ ಡಿ.ಬಿ. ಮೆಹ್ತಾ ತಿಳಿಸಿದರು.
ಆಸ್ಪತ್ರೆಯ ಸಭಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಲಿರುವ ಶಿಬಿರದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಟ್ ಉದಯ ಕುಮಾರ್, ಕ್ರೆಡಯ್ ಗೌರವ ಕಾರ್ಯದರ್ಶಿ ನವೀನ್ ಕಾರ್ಡೋಸಾ, ಕೋಶಾಧಿಕಾರಿ ಡಾ. ಎರಿಲ್ ಪಿಂಟೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News