ಸಾಧ್ವಿ ಪ್ರಜ್ಞಾಗೆ ಎನ್‌ಐಎ ಕ್ಲೀನ್ ಚಿಟ್ : ಕರ್ಕರೆ ತಂಡದ ಅಧಿಕಾರಿಗಳಿಗೆ ಸಂಶಯ

Update: 2016-05-14 11:26 GMT

ಮುಂಬೈ : ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳೇ ಆರ್‌ಡಿಎಕ್ಸ್ ಇರಿಸಿ ಮಾಲೆಗಾಂವ್ ಸ್ಫೋಟದ ಶಂಕಿತ ಆರೋಪಿಗಳ ಮೇಲೆ ತಪ್ಪು ಆರೋಪ ಬರುವಂತೆ ಮಾಡಿದ್ದಾರೆಂಬ ರಾಷ್ಟ್ರೀಯ ತನಿಖಾ ಏಜನ್ಸಿ ವಾದವನ್ನು 2008ರಲ್ಲಿ ಸಂಭವಿಸಿದ ಈ ಸ್ಫೋಟದ ತನಿಖೆಯನ್ನು ನಡೆಸಿದ್ದ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಏಜನ್ಸಿ ಈ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಗೆ ಕ್ಲೀನ್ ಚಿಟ್ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

‘‘ಪ್ರಕರಣ ಅವರ ಕೈಯ್ಯಲ್ಲಿದೆ. ಈ ಬಗ್ಗೆ ನಾವು ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ಅವರು ಹೇಳಿದ್ದು ನಿಜವಾದರೆ ಅವರೇಕೆ ಲೆ.ಕ. ಪ್ರಸಾದ್ ಪುರೋಹಿತ್ ಅವರಿಗೆ ಕ್ಲೀನ್ ಚಿಟ್ ನೀಡಿಲ್ಲ? ನಮ್ಮ ಬಾಸ್ ಹೇಮಂತ್ ಕರ್ಕರೆ ಈಗಿಲ್ಲವಾದರೂ ಅವರು ನಡೆಸಿದ ತನಿಖೆಯ ಮೇಲೆ ನಮಗೆ ವಿಶ್ವಾಸವಿದೆ’’ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದರು.

ಕರ್ಕರೆಯವರ ನೇತೃತ್ವದಲ್ಲಿ ಎಟಿಎಸ್ ಅಂದು ಪ್ರಪ್ರಥಮ ಬಾರಿಗೆ ಬಲಪಂಥೀಯ ಸಂಘಟನೆಯ ಸದಸ್ಯರನ್ನು ಬಂಧಿಸಿದ್ದು ಕೆಲ ರಾಜಕೀಯ ಪಕ್ಷಗಳಿಗೆ ಸಹಿಸಲಸಾಧ್ಯವಾಗಿತ್ತು ಎಂದು ಮೂಲಗಳು ತಿಳಿಸುತ್ತವೆ.

‘‘ಎಟಿಎಸ್ ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾಗ ನ್ಯಾಯಕ್ಕಾಗಿ ನಾವು ಆದಷ್ಟು ಶ್ರಮಿಸಿದ್ದೆವು. ಈಗ ಕರ್ಕರೆಯವರು ಇಲ್ಲದಿರುವಾಗ ಅವರು ನಡೆಸಿದ ತನಿಖೆಯನ್ನು ಸಂಶಯಿಸುವುದು ಸರಿಯಲ್ಲ,’’ಎಂದು ಈ ತನಿಖೆಯ ಭಾಗವಾಗಿದ್ದ ಎಟಿಎಸ್ ಅಧಿಕಾರಿಯೊಬ್ಬರು ಹೇಳಿದರು.

‘‘ಫೋನ್ ಸಂಭಾಷಣೆ,ಸಂಚಿನ ಸಭೆಗಳು ಮತ್ತು ಆರ್ಥಿಕ ವ್ಯವಹಾರಗಳು ಈ ಪ್ರಕರಣದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ’’ಎಂದು ಅವರು ತಿಳಿಸಿದರು.

ಈಗ ವಿಭಿನ್ನ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಅಂದು ಎಟಿಸ್ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಇತ್ತೀಚಿಗಿನ ಬೆಳವಣಿಗೆಗಳಿಂದ ಈ ಪ್ರಕರಣಕ್ಕೆ ಮತ್ತೆ ಗಮನ ಹರಿಸುವಂತಾಗಿದೆ.

ಕೆಲವುಎಟಿಎಸ್ ಅಧಿಕಾರಿಗಳು ಈ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News