ಇನ್ನು ಇವರು ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ

Update: 2016-05-14 14:50 GMT

ವಾಶಿಂಗ್ಟನ್, ಮೇ 14: ಈ 116 ವರ್ಷದ ಇಟಲಿಯ ಮಹಿಳೆ ಬಹುರ್ಷ 19ನೆ ಶತಮಾನದಲ್ಲಿ ಹುಟ್ಟಿ ಈಗ ಬದುಕಿರುವ ಕೊನೆಯ ವ್ಯಕ್ತಿಯಾಗಿರಬಹುದು.
ಎಮ್ಮಾ ಮೊರಾನೊ ಉತ್ತರ ಇಟಲಿಯ ಪೈಡ್‌ಮಾಂಟ್ ವಲಯದಲ್ಲಿ 1899 ನವೆಂಬರ್ 29ರಂದು ಜನಿಸಿದರು. ಅವರು ಈಗ ಜಗತ್ತಿನ ಬದುಕಿರುವ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ ಹಾಗೂ ಮೂರು ಶತಮಾನಗಳನ್ನು ಕಂಡ ಏಕೈಕ ವ್ಯಕ್ತಿಯಾಗಿದ್ದಾರೆ. ಹಸಿ ಮೊಟ್ಟೆ ತಿನ್ನುವ ಮತ್ತು ಬ್ರಾಂಡಿ ಕುಡಿಯುವ ಈ ಮಹಿಳೆ, ತನ್ನ ದೀರ್ಘಾಯುಷ್ಯಕ್ಕೆ ತಾನು ಪ್ರತಿ ದಿನ ತಿನ್ನುವ ಮೊಟ್ಟೆ, ಬೇಗನೆ ಮಲಗುವುದು ಹಾಗೂ ಏಕಾಂಗಿಯಾಗಿರುವುದು ಕಾರಣ ಎಂದು ಹೇಳುತ್ತಾರೆ.
ಅವರಿಗಿಂತ ಕೆಲವು ತಿಂಗಳು ಹಿರಿಯರಾಗಿರುವ ನ್ಯೂಯಾರ್ಕ್ ನಿವಾಸಿ ಸುಸಾನಾ ಮಶಟ್ ಜೋನ್ಸ್ ಈವರೆಗೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದರು. ಅವರು ಗುರುವಾರ ನಿಧನರಾದರು. ಈಗ ಮೊರಾನೊ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
ಎಮ್ಮಾ ಈಗ ಸ್ವಿಝರ್‌ಲ್ಯಾಂಡ್ ಗಡಿಯಲ್ಲಿರುವ ಸಣ್ಣ ಪಟ್ಟಣವೊಂದರಲ್ಲಿ ವಾಸಿಸುತ್ತಿದ್ದಾರೆ. 116 ವರ್ಷದ ಈ ಮಹಿಳೆಯ ಆರೋಗ್ಯ ಉತ್ತಮವಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಅವರು ಗಂಡನೊಂದಿಗೆ ಸಂತೋಷವಾಗಿರಲಿಲ್ಲ. ಹಾಗಾಗಿ 1938ರಲ್ಲಿ ಗಂಡನಿಂದ ಪ್ರತ್ಯೇಕಗೊಂಡರು ಹಾಗೂ ಆ ಬಳಿಕ ಮದುವೆಯಾಗಲಿಲ್ಲ. ‘‘ನನ್ನ ಮೇಲೆ ಸವಾರಿ ಯಾರೂ ಸವಾರಿ ಮಾಡುವುದನ್ನು ನಾನು ಸಹಿಸುವುದಿಲ್ಲ’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News