ಬೈಕ್ ಸ್ಕಿಡ್: ಸವಾರ ಮೃತ್ಯು
Update: 2016-05-14 21:43 IST
ಮಂಗಳೂರು,ಮೇ.14:ನಗರದ ಪಾಂಡೇಶ್ವರ ದ ಫೋರಂ ಫಿಜಾ ಮಾಲ್ ಎದುರುಗಡೆ ರಸ್ತೆಯಲ್ಲಿ ಮೇ 13 ರಂದು ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಆಶಿಸ್ ಚಂದನ್ ಮೃತಪಟ್ಟಿದ್ದಾರೆ.
ಶುಕ್ರವಾರದಂದು ರಾತ್ರಿ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಭೈಕ್ ಸ್ಕಿಡ್ ಆಗಿ ಆಶಿಸ್ ಚಂದನ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದರು. ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.