×
Ad

ದ.ಕ.: ಜಿಲ್ಲೆಯ ಹಲವೆಡೆ ಮಳೆ

Update: 2016-05-14 22:06 IST

ಮಂಗಳೂರು, ಮೇ 14: ಜಿಲ್ಲೆಯ ಮಂಗಳೂರು, ಪುತ್ತೂರು, ಸುಳ್ಯ ತಾಲೂಕಿನ ಕೆಲವಡೆ ಮಳೆಯಾಗಿದೆ.

ಮಂಗಳೂರು ತಾಲೂಕಿನಲ್ಲಿ 5 ಮಿ.ಮೀ., ಪುತ್ತೂರಿನಲ್ಲಿ 7 ಮಿ.ಮೀ., ಕಡಬದಲ್ಲಿ 4 ಮಿ.ಮೀ., ಸುಳ್ಯದಲ್ಲಿ 7 ಮಿ.ಮೀ. ಮಳೆಯಾಗಿದೆ.

ಸಿಡಿಲಿಗೆ ಮಗುವಿಗೆ ಗಾಯ:

ಬೆಳ್ತಂಗಡಿ ತಾಲೂಕಿನ ಮಾಳವಂತಿಗೆ ಗ್ರಾಮದಲ್ಲಿ ಸಿಡಿಲಿನ ಆರ್ಭಟಕ್ಕೆ ಮಗುವೊಂದು ಗಾಯಗೊಂಡ ಘಟನೆ ನಡೆದಿದೆ. ಮಳವಂತಿಗೆ ಗ್ರಾಮದ ಮಾಲೂರುನ ಕೃಷ್ಣಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದಿದ್ದು ಮನೆಯೊಳಗಿದ್ದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News