×
Ad

ಉಳ್ಳಾಲ ಕೋಡಿ: ಇತ್ತಂಡಗಳ ನಡುವೆ ಹೊಡೆದಾಟ

Update: 2016-05-14 22:35 IST

ಉಳ್ಳಾಲ, ಮೇ 14: ಉಳ್ಳಾಲ ಠಾಣಾ ವ್ಯಾಪ್ತಿಯ ಉಳ್ಳಾಲ ಕೋಡಿ ಎಂಬಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದು ಮೂವರು ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಗಾಯಗೊಂಡ ಉಳ್ಳಾಲಕೋಡಿ ನಿವಾಸಿಗಳಾದ ಹುಸೈನ್ ಪಳ್ಳಿಯಬ್ಬ (42), ಮುಹಮ್ಮದ್ ತೌಸೀಫ್ (28) ಹಾಗೂ ಮತ್ತೊಂದು ತಂಡದ ಅಬ್ದುಲ್ ಅಝೀಝ್ (43) ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ

ಹುಸೈನ್ ಪಳ್ಳಿಯಬ್ಬರು ವಿದೇಶದಲ್ಲಿದ್ದ ಸಂದರ್ಭ ಅಬ್ದುಲ್ ಅಝೀಜ್ ಯಾನೆ ಯುರೋಪಿಯನ್ ಅಝೀಝ್ 40,000 ರೂ.ನ್ನು ಸಾಲವಾಗಿ ಪಡೆದುಕೊಂಡಿದ್ದರು. ಹಣ ಪಡೆದು ಐದು ವರ್ಷಗಳಾದರೂ ಅಝೀಝ್ ಹಣವನ್ನು ಹಿಂತಿರುಗಿಸಿರಲಿಲ್ಲ. ಶನಿವಾರ ರಾತ್ರಿ ಬೈಕಿನಲ್ಲಿ ಅಝೀಝ್ ತೆರಳುತ್ತಿದ್ದಾಗ ಹುಸೈನ್ ಹಣವನ್ನು ಕೇಳಿದ್ದರು. ಇದನ್ನು ವಿರೋಧಿಸಿದ ಅಬ್ದುಲ್ ಅಝೀಝ್ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಕೈಯಲ್ಲಿದ್ದ ಬೀಗದಿಂದ ಹುಸೈನ್ ಮತ್ತು ತೌಸೀಫ್‌ರಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.

ದರ್ಗಾ ಆಡಳಿತ ವಿಚಾರ

ಪ್ರತಿದೂರು ದಾಖಲಿಸಿರುವ ಅಬ್ದುಲ್ ಅಝೀಝ್ ಯಾನೆ ಯುರೋಪಿಯನ್ ಅಝೀಝ್,ಕೋಡಿ ಸಮೀಪ ಬೈಕಿನಲ್ಲಿ ತೆರಳುತ್ತಿದ್ದಾಗ ಕಬುರ್ ಆಸಿಫ್, ಜಲ್ದಿ ಸಿದ್ದೀಖ್, ಹುಸೈನ್ ಪಳ್ಳಿಯಬ್ಬ ಹಾಗೂ ತೌಸೀಫ್ ಎಂಬವರು ಸೇರಿಕೊಂಡು ತಡೆದು ಮರದ ರೀಪಿನಿಂದ ಹಲ್ಲೆ ನಡೆಸಿದ್ದಾರೆ. ಅಬ್ದುಲ್ ಅಝೀಝ್ ದರ್ಗಾ ಸಮಿತಿಯ ಒಂದು ಬಣದಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News