ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ-ಉದ್ಯೋಗ ತರಬೇತಿ ಬಗ್ಗೆ ಅರಿವು ಕಾರ್ಯಾಗಾರ

Update: 2016-05-14 17:48 GMT

ಬೆಳ್ತಂಗಡಿ, ಮೇ 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ-ಉದ್ಯೋಗ ತರಬೇತಿಯ ಬಗ್ಗೆ ಅರಿವು ಕಾರ್ಯಾಗಾರ ನಡೆಯಿತು.
 
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜಿತ್ ರಾಜಣ್ಣ, ರುಡ್‌ಸೆಟ್ ಸಂಸ್ಥೆಯ ಮೂಲ ಧ್ಯೇಯ ಸಮಾಜದ ಯುವಜನತೆಗೆ ಸ್ವಉದ್ಯೋಗವನ್ನು ಕಲ್ಪಿಸಿಕೊಡುವುದು ಹಾಗೂ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವುದು. ನಿರುದ್ಯೋಗ ಸಮಸ್ಯೆಯ ಕಾರಣದಿಂದ ಈ ಸಂಸ್ಥೆಯನ್ನು ರಚಿಸಲು ಸಾಧ್ಯವಾಯಿತು ಎಂದರು.

ವೇದಿಕೆಯಲ್ಲಿ ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಾಹಂ ಜೇಮ್ಸ್, ಎಸ್‌ಡಿಎಂಬಿಇಡಿ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಕೆ., ಕಾರ್ಯಕ್ರಮದ ಸಂಯೋಜಕಿ ಕಾಲೇಜಿನ ಉಪನ್ಯಾಸಕಿ ಶೈಲಜಾ ಎ.ಆರ್. ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಗೌರೀಶ್ ಸ್ವಾಗತಿಸಿ, ಸೌಮ್ಯಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News