×
Ad

ಮೇ 22ರಂದು ಬೆಳ್ತಂಗಡಿಯಲ್ಲಿ ಕುಂಭ ಕಲೋತ್ಸವ

Update: 2016-05-14 23:30 IST

ಬೆಳ್ತಂಗಡಿ, ಮೇ 14: ಕುಲಾಲ-ಕುಂಬಾರರ ಸಾಂಸ್ಕೃತಿಕ ಸಮಿತಿ ಬೆಳ್ತಂಗಡಿ ತಾಲೂಕು, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ವತಿಯಿಂದ ಮೇ 22 ರಂದು ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ಕುಂಭ ಕಲೋತ್ಸವ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಉಮೇಶ್ ಕುಲಾಲ್ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4:30ಕ್ಕೆ ಮೀರಾ ವಾಸುದೇವ ಪೆರಾಜೆ ಕಲೋತ್ಸವವನ್ನು ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಪದ್ಮಮೂಲ್ಯ ಅನಿಲಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ. ರೋಹಿಣಾಕ್ಷ ಶಿರ್ಲಾಲು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸದಾನಂದ ನಾವರ, ರಾಜ್ಯ ಕುಲಾಲ ಕುಂಬಾರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮಕುಮಾರ್, ನಡುಬೊಟ್ಟು ಶ್ರೀ ರೌದ್ರನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ನಡುಬೊಟ್ಟು, ಪಣಕಜೆ ಎಸ್.ಎಸ್. ಕನ್‌ಸ್ಟ್ರಕ್ಷನ್‌ನ ಸೀತಾರಾಮ ಮೂಲ್ಯ, ಸಾಮಾಜಿಕ ಕಾರ್ಯಕರ್ತ ಉಮೇಶ್ ನಡ್ತಿಕಲ್ಲು ಭಾಗವಹಿಸಲಿದ್ದಾರೆ ಎಂದರು.

 ಸಂಜೆ 6 ಗಂಟೆಗೆ ಕುಂಬಾರ ಸಮಾಜದಲ್ಲಿನ ಸಾಧಕರಾದ ಕಸ್ತೂರಿ ಬಾಯಿ ಟೀಚರ್, ಮಾಜಿ ಸೈನಿಕ ಉಮೇಶ್ ಮಾಲಾಡಿ, ನಿವೃತ್ತ ಎಎಸ್ಸೈ ಪರಮೇಶ್ವರ ಮೂಲ್ಯ, ಹಿರಿಯ ಕಾರ್ಯಕರ್ತ ಗಂಗಯ್ಯ ಮೂಲ್ಯ, ವಾಸು ಟೈಲರ್, ಧರ್ಣಮ್ಮ ಹೊರನಾಡು, ಚಾಲಕ ಅನಂದ ಮೂಲ್ಯ, ಎಂ.ಎಸ್.ರಾಜು ಕುತ್ಲೂರು, ಗಿರೀಶ್ ಮಾಸ್ತರ್ ವೇಣೂರು, ಕರುಣಾಕರ ಕುಲಾಲ್, ನಾರಾಯಣ ಮೂಲ್ಯ ಬಂದಾರು, ನಂದಕುಮಾರ್ ಉಜಿರೆ, ಮೋಹನ ಕುಮಾರ್ ಕಬ್ಬಿನಹಿತ್ಲು, ರಮಾ ಸಿಸ್ಟರ್ ವರಕಬೆ ಇವರುಗಳಿಗೆ ಸಮ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರ ದಿನಕರ ಬಂಗೇರ ಖಂಡಿಗ, ಪ್ರಧಾನ ಕಾರ್ಯದರ್ಶಿ ಜಯರಾಜ್ ಪಕ್ಕಿದಕಲ, ಜೊತೆಕಾರ್ಯದರ್ಶಿ ಜಗದೀಶ್ ಮಾಪಲಾಡಿ, ಕೋಶಾಧಿಕಾರಿ ಮೋಹಾನಂದ ಕುಲಾಲ್, ಮಹಿಳಾ ಸಂಘಟಕಿ ವಿಮಲ ಕಂಚಿಂಜ, ಸಂಘಟಕರಾದ ಕವನ್ ಕೊಜಪ್ಪಾಡಿ, ಸತೀಶ್ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News