ರೈಲ್ವೆ ಕಾಮಗಾರಿ: ರೈಲು ಸಂಚಾರ ವ್ಯತ್ಯಯ
Update: 2016-05-14 23:49 IST
ಉಡುಪಿ, ಮೇ 14: ಮಂಗಳೂರು ಜಂಕ್ಷನ್ ಹಾಗೂ ಪಡೀಲ್ ನಡುವೆ ದಕ್ಷಿಣ ರೈಲ್ವೆಯಿಂದ ಹೊಸ ಸಬ್‌ವೇ ನಿರ್ಮಾಣಕ್ಕಾಗಿ ಇಂಜಿನಿಯರಿಂಗ್ ಕೆಲಸ ನಡೆಯಲಿರುವುದರಿಂದ ಮೇ 15 ಹಾಗೂ 29ರಂದು ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
ಮಡಂಗಾವ್-ಮಂಗಳೂರು-ಮಡಂಗಾವ್ ಇಂಟರ್‌ಸಿಟಿ ಎಕ್ಸ್ ಪ್ರೆಸ್ ರೈಲು ಸಂಚಾರ ಮೇ 15 ಮತ್ತು 29ರಂದು ರದ್ದುಗೊಳ್ಳಲಿದೆ. ರೈಲು ನಂ. 56666/56665 ಮೂಕಾಂಬಿಕಾ ರೋಡ್ ಬೈಂದೂರು-ಕಾಸರಗೋಡು -ಮೂಕಾಂಬಿಕಾ ರೋಡ್ ಬೈಂದೂರು ರೈಲು ಸಂಚಾರ ಈ ಎರಡು ದಿನ ಗಳಂದು ಮಂಗಳೂರು ಜಂಕ್ಷನ್- ಮೂಕಾಂಬಿಕಾ ರೋಡ್-ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದುಗೊಳ್ಳಲಿದೆ.