×
Ad

ಐಕ್ಯರಂಗದಿಂದ ಅಪಪ್ರಚಾರ: ಮುಸ್ತಫಾ ಆರೋಪ

Update: 2016-05-14 23:54 IST

ಕಾಸರಗೋಡು, ಮೇ 14: ಮಂಜೇಶ್ವರದಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಅಪಪ್ರಚಾರ ನಡೆಸಿ ಮತಗಳನ್ನು ಒಡೆಯಲು ಐಕ್ಯರಂಗ ಪ್ರಯತ್ನಿಸುತ್ತಿದೆ ಎಂದು ಎಡರಂಗ ಮಂಜೇಶ್ವರ ವಿಧಾನಸಭಾ ಪ್ರಚಾರ ಸಂಚಾಲಕ ವಿ.ಪಿ.ಪಿ. ಮುಸ್ತಫಾ ಆರೋಪಿಸಿದರು. ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2006ರಂತೆ ಈ ಬಾರಿ ಫಲಿತಾಂಶ ಮರುಕಳಿಸಲಿದೆ. ಐಕ್ಯರಂಗ ಮೂರನೇ ಸ್ಥಾನಕ್ಕೆ ತಲುಪಲಿದೆ. ಎಡರಂಗಕ್ಕೆ ಬಿಜೆಪಿ ಪ್ರತಿಸ್ಪರ್ಧಿಯಾಗಿದ್ದು, ಸುಲಭ ಅಂತರದ ಗೆಲುವು ಸಾಧಿಸಲಿದೆ ಎಂದರು. ಎಡರಂಗಕ್ಕೆ ಎಲ್ಲ ವಲಯಗಳಿಂದ ಬೆಂಬಲ ಲಭಿಸುತ್ತಿದೆ. ಈ ಹಿಂದೆ ಸಿ.ಎಚ್.ಕುಂಞಂಬು ಶಾಸಕರಾಗಿದ್ದ ಸಂದರ್ಭ ಮಾಡಿದ ಅಭಿವೃದ್ಧಿ ಯೋಜನೆಗಳು ಈ ಬಾರಿ ವರದಾನವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ವಿ. ರಾಜನ್, ಪಿ.ಬಿ.ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News