ಕೇರಳ ವಿಧಾನಸಭೆ ಚುನಾವಣಾ ಪ್ರಚಾರ: ತ್ರಿಕೋನ ಸ್ಪರ್ಧೆ
ಕಾಸರಗೋಡು, ಮೇ 15: ಕೇರಳ ವಿಧಾನಸಭೆ ಚುನಾವಣಾ ಪ್ರಚಾರ ಕಾವು ಪಡೆದುಕೊಂಡಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಾಂಪ್ರದಾಯಿಕ ಎದುರಾಳಿಗಳಾದ
ಎಲ್‌ಡಿಎಫ್ ಹಾಗೂ ಯುಡಿಎಫ್ ಹೊರತುಪಡಿಸಿ ಎನ್ಡಿಎ ಒಕ್ಕೂಟವೂ ಪ್ರಬಲ ಸ್ಪರ್ಧೆ ಒಡ್ಡಿರುವುದರಿಂದ ಚುನಾವಣಾ ಕಣ ಕುತೂಹಲ ಮೂಡಿಸಿದೆ.
ಕಳೆದ 60 ವರ್ಷಗಳಿಂದ ಬರೀ ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಮತ್ತು ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ರಾಜಕೀಯ ಒಕ್ಕೂಟಗಳ ಭದ್ರಕೋಟೆಯಾಗಿದ್ದ ಕೇರಳ ಈ ಬಾರಿ ಎನ್ಡಿಎ ಒಳಗೊಂಡಂತೆ ತ್ರಿಕೋನ ಚುನಾವಣಾ ಜಿದ್ದಾಜಿದ್ದಿಗೆ ಸಾಕ್ಷಿಯಾಗುತ್ತಿದೆ.
ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಿಗೆ 2.61 ಕೋಟಿ ಮತದಾರರು ನಾಳೆ ತಮ್ಮ ಹಕ್ಕು ಚಲಾಯಿಸುವರು. 1,203 ಅಭ್ಯರ್ಥಿಗಳು ತಮ್ಮ ಭವಿಷ್ಯ ನಿರ್ಧರಿಸಲಿದ್ದಾರೆ.
ಈ ಪೈಕಿ 109 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.
ಮತದಾನ ನಾಳೆ ಬೆಳಗ್ಗೆ 7 ರಿಂದ ಸಂಜೆ 6 ರ ತನಕ ನಡೆಯಲಿದ್ದು, 21,498 ಮತಗಟ್ಟೆ ಗಳನ್ನು ಸಜ್ಜುಗೊಳಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 1233 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
3142 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಭದ್ರತೆಗಾಗಿ ಕೇರಳ ಪೊಲೀಸ್ ಅಲ್ಲದೆ ಕೇಂದ್ರ ಪಡೆಯನ್ನು ನಿಯೋಜಿಸಲಾಗಿದೆ.
ನಕಲಿ ಮತದಾನ ತಡೆಯಲು ಎಲ್ಲಾ ರೀತಿಯ ಭದ್ರತೆ ಕಲ್ಪಿಸಲಾಗಿದೆ.
ಈ ಬಾರಿ 2.61 ಕೋಟಿ ಮತದಾರರಿದ್ದಾರೆ.
ಕಾಸರಗೋಡು ಜಿಲ್ಲೆ :
ಗಡಿನಾಡಾದ ಕಾಸರಗೋಡಿನಲ್ಲೂ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ , ಸಿಪಿಎಂ ನೇತೃತ್ವದ ಎಲ್ ಡಿ ಎಫ್ ಹಾಗೂ ಬಿಜೆಪಿ ನೇತೃತ್ವದ ಎನ್ ಡಿ ಎ ನಡುವೆ ಪ್ರಬಲ ಸ್ಪರ್ಧೆ ನಡೆಯುತ್ತಿವೆ.
ಈ ಪೈಕಿ ಮಂಜೇಶ್ವರ ಮತ್ತು ಕಾಸರಗೋಡು ಬಿಜೆಪಿಗೆ ನಿರ್ಣಾಯಕವಾಗಿದೆ. ಬಿಜೆಪಿ ಮಂಜೇಶ್ವರದಲ್ಲಿ ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ.
ಕಾಸರಗೋಡಿ ನಲ್ಲೂ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದೆ.
ಮುಸ್ಲಿಂ ಲೀಗ್ ನ ಭದ್ರಕೋಟೆ ಯಾಗಿದ್ದ ಮಂಜೇಶ್ವರದಲ್ಲಿ 2006 ರಲ್ಲಿ ಸಿಪಿಎಂ ನ ಸಿ. ಎಚ್ ಕುಞಾಂಬು ಗೆಲ್ಲುವ ಮೂಲಕ ಅಚ್ಚರಿ ಹುಟ್ಟಿಸಿದ್ದರು. 2011 ರಲ್ಲಿ ಮತ್ತೆ ಮುಸ್ಲಿಂ ಲೀಗ್ ಈ ಸ್ಥಾನ ವನ್ನು ಪಡೆದುಕೊಂಡಿತ್ತು.
ಈ ಬಾರಿ ಹಾಲಿ ಶಾಸಕ ಪಿ . ಬಿ ಅಬ್ದುಲ್ ರಝಾಕ್ , ಸಿಪಿಎಂ ನಿಂದ ಸಿ . ಎಚ್ ಕುಞಾಂಬು ಮತ್ತು ಬಿಜೆಪಿ ಯಿಂದ ಕೆ . ಸುರೇಂದ್ರನ್ ಕಣಕ್ಕಿಳಿದಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಕನ್ನಡಿಗರ ಮತ ಇಲ್ಲಿ ನಿರ್ಣಾಯಕ:
ಜೆಪಿಗೆ ಅವಕಾಶ ಇರುವ ಕಾಸರಗೋಡು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಕಾಣಿಸುತ್ತಿದೆ. ಕನ್ನಡಿಗ ರವೀಶ್ ತಂತ್ರಿ ಕುಂಟಾರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಹಾಲಿ ಶಾಸಕ ಎನ್.ಎ. ನೆಲ್ಲಿಕುನ್ನು ಯುಡಿಎಫ್‌ನ (ಮುಸ್ಲಿಂ ಲೀಗ್) ಅಭ್ಯರ್ಥಿ. ವೈದ್ಯ ಎ.ಎ. ಅಮೀನ್ ಎಲ್‌ಡಿಎಫ್ ಘಟಕ ಪಕ್ಷ ಇಂಡಿಯನ್ ನ್ಯಾಷನಲ್ ಲೀಗ್‌ನ (ಐಎನ್‌ಎಲ್) ಅಭ್ಯರ್ಥಿ ಯಾಗಿದ್ದಾರೆ.
ಬಿಜೆಪಿ ಗೆಲ್ಲಲು ಸಕಲ ಯತ್ನ ಮಾಡುತ್ತಿರುವ ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಎಲ್ಲ ರೀತಿಯ ತಂತ್ರ –ಪ್ರತಿತಂತ್ರ ಕಾಣಿಸುತ್ತಿದೆ. ಹಾಗಾಗಿ ಇಲ್ಲಿ ಯಾರಿಗೂ ಗೆಲುವು ಸುಲಭವಲ್ಲ.
ಆದರೆ ಉದುಮ , ಕಾಞಂಗಾಡ್ ಮತ್ತು ತ್ರಿಕ್ಕರಿಪುರದಲ್ಲಿ ಯು ಡಿ ಎಫ್ ಮತ್ತು ಎಲ್ ಡಿ ಎಫ್ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಇಲ್ಲಿ ಎನ್ ಡಿ ಎ ಪ್ರಬಲವಾಗಿಲ್ಲ . ಆದರೆ ಎನ್ ಡಿ ಎ ಪಡೆಯುವ ಮತಗಳ ಮೇಲೆ ಎರಡೂ ಪಕ್ಷಗಳ ಸೋಲು - ಗೆಲುವು ನಿರ್ಧರಿಸಲಿದೆ.
ಮಂಜೇಶ್ವರ 8, ಕಾಸರಗೋಡು 7, ಉದುಮ 10, ಕಾಞಂಗಾಡ್ 12 ಮತ್ತು ತ್ರಿಕ್ಕರಿಪುರದಲ್ಲಿ 9 ಅಭ್ಯರ್ಥಿಗಳಿದ್ದಾರೆ.
ಜಿಲ್ಲೆಯಲ್ಲಿ 799 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.
186 ಸೂಕ್ಷ್ಮ ಮತಗಟ್ಟೆ ಗಳಾಗಿದ್ದು, ಈ ಪೈಕಿ 26 ಅತೀ ಸೂಕ್ಷ್ಮ ಮತಗಟ್ಟೆ ಗಳಾಗಿವೆ. 9,90,513 ಮಂದಿ ಮತದಾರರಿದ್ದಾರೆ.
ಮತದಾನ ನಾಳೆ ಬೆಳಿಗ್ಗೆ 7 ರಿಂದ ಸಂಜೆ ಆರರ ತನಕ ನಡೆಯಲಿದ್ದು ಮತ ಎಣಿಕೆ 19 ರಂದು ನಡೆಯಲಿದೆ.
ಕಾಸರಗೋಡಿನ ಐದು ಕ್ಷೇತ್ರಗಳ ಅಭ್ಯರ್ಥಿಗಳು
ಮಂಜೇಶ್ವರ
-----------------
ಪಿ. ಬಿ ಅಬ್ದುಲ್ ರಝಾಕ್ ( ಮುಸ್ಲಿಂ ಲೀಗ್ - ಯು ಡಿ ಎಫ್ )
ಸಿ. ಎಚ್ ಕುಞಾಂಬು ( ಸಿಪಿಎಂ- ಎಲ್ ಡಿ ಎಫ್ )
ಕೆ . ಸುರೇಂದ್ರನ್ ( ಬಿಜೆಪಿ - ಎನ್ ಡಿ ಎ )
ರವಿಚಂದ್ರ ( ಬಿ ಎಸ್ ಪಿ )
ಬಷೀರ್ ಆಹಮ್ಮದ್ ಎಸ್ . ಎಂ ( ಪಿ ಡಿ ಪಿ )
ಜೋನ್ ಡಿ ಸೋಜ ಐ . (ಪಕ್ಷೇತರ )
ಮುನೀರ್ ಕೆ .ಪಿ ( ಪಕ್ಷೇತರ )
ಕೆ . ಸುಂದರ ( ಪಕ್ಷೇತರ )
ಕಾಸರಗೋಡು
-------------------
ಎನ್. ಎ ನೆಲ್ಲಿಕುನ್ನು ( ಮುಸ್ಲಿಂ ಲೀಗ್ - ಯು ಡಿ ಎಫ್ )
ವಿಜಯಕುಮಾರ್ ಬಿ . ( ಬಿ ಎಸ್ ಪಿ )
ರವೀಶ ತಂತ್ರಿ ಕುಂಟಾರು (ಬಿಜೆಪಿ - ಎನ್ ಡಿ ಎ )
ಡಾ . ಎ . ಎ ಅಮೀನ್ ( ಐ ಎನ್ ಎಲ್ - ಎಲ್ ಡಿ ಎಫ್ )
ಎ . ದಾಮೋದರ ( ಪಕ್ಷೇತರ )
ಮುನೀರ್ ಮುನಂಬ ( ಪಕ್ಷೇತರ )
ರೋಶನ್ ಕುಮಾರ್ ( ಪಕ್ಷೇತರ )
ಉದುಮ
----------------
ಕೆ . ಕುಂಞಿರಾಮನ್ ( ಸಿಪಿಎಂ - ಎಲ್ ಡಿ ಎಫ್ )
ಕೆ . ಶ್ರೀಕಾಂತ್ ( ಬಿಜೆಪಿ - ಎನ್ ಡಿ ಎ )
ಕೆ . ಸುಧಾಕರನ್ ( ಕಾಂಗ್ರೆಸ್ - ಯು ಡಿ ಎಫ್ )
ಗೋಪಿ ಕುದಿರಕಲ್ ( ಪಿ ಡಿ ಪಿ )
ಗೋವಿಂದನ್ ಬಿ . ( ಎ ಪಿ ಐ )
ಮುಹಮ್ಮದ್ ಪಾಕ್ಯರ್ ( ಎಸ್ ಡಿ ಪಿ ಐ )
ಅಬ್ಬಾಸ್ ಮುದಲಪ್ಪಾರ ( ಪಕ್ಷೇತರ )
ಕೆ . ಕುನ್ಚಿರಾಮನ್ ( ಪಕ್ಷೇತರ )
ದಾಮೋದರ ಪಿ . ( ಪಕ್ಷೇತರ)
ಸುಧಾಕರ ( ಪಕ್ಷೇತರ)
ಕಾಞಂಗಾಡ್
---------------------
ಇ . ಚಂದ್ರಶೇಖರನ್ ( ಸಿಪಿಐ - ಎಲ್ ಡಿ ಎಫ್ )
ಧನ್ಯಾ ಸುರೇಶ್ ( ಕಾಂಗ್ರೆಸ್ - ಯು ಡಿ ಎಫ್ )
ಚಂದ್ರನ್ ಪರಪ್ಪ ( ಬಿ ಎಸ್ ಪಿ )
ಹುಸೈನಾರ್ ಮುಟ್ಟತ್ತಲ ( ಪಿ ಡಿ ಪಿ )
ಬಾಲಚಂದ್ರ ಕರಿಂಬಿಲ್ ( ಶಿವಸೇನೆ)
ಎಂ . ಪಿ ರಾಘವನ್ ( ಬಿ ಡಿ ಜೆ ಎಸ್ - ಎನ್ ಡಿ ಎ )
ರಾಘವನ್ ಬಿ . ಪುಡ೦ಗಲ್ ( ಎ ಪಿ ಐ )
ಕೆ . ಯು ಕೃಷ್ಣ ಕುಮಾರ್ ( ಪಕ್ಷೇತರ )
ಎಂ . ದಾಮೋದರನ್ ( ಪಕ್ಷೇತರ )
ಬಾಲಕೃಷ್ಣ ಕೂಕಲ್ ( ಪಕ್ಷೇತರ )
ಮುಹಮ್ಮದ್ ವಿ . ವಿ ( ಪಕ್ಷೇತರ )
ಸಜೀವನ್ ಆರ್ . ( ಪಕ್ಷೇತರ )
ತ್ರಿಕ್ಕರಿಪುರ
------------------
ಕೆ .ಪಿ ಕುನ್ಚಿಕಣ್ಣನ್ ( ಕಾಂಗ್ರೆಸ್ - ಯು ಡಿ ಎಫ್ )
ಭಾಸ್ಕರನ್ ಎಂ. ( ಬಿಜೆಪಿ - ಎನ್ ಡಿ ಎ )
ಎಂ . ರಾಜಗೋಪಾಲ್ ( ಸಿಪಿಎಂ - ಎಲ್ ಡಿ ಎಫ್ )
ಸಿ . ಎಚ್ ಮುತ್ತಲಿಬ್ ( ವೆಲ್ಫೇರ್ ಪಾರ್ಟಿ )
ಎಂ . ವಿ ಶೌಕಾತ್ತಾಲಿ ( ಎಸ್ ಡಿ ಎಫ್ ಐ )
ಕೆ .ಪಿ ಕುನ್ಚಿಕಣ್ಣನ್ ( ಪಕ್ಷೇತರ )
ಕುನ್ಚಿಕಣ್ಣನ್ ಪಿ . ಎಂ ( ಪಕ್ಷೇತರ )
ಪುರುಷೋತ್ತಮನ್ ಪಿ. ಪಿ ( ಪಕ್ಷೇತರ )
ಕೆ . ಎಂ ಶ್ರೀಧರನ್ ( ಪಕ್ಷೇತರ )
ನಾಳೆ ನಡೆಯುವ ವಿಧಾನಸಭೆ ಚುನಾವಣೆ ಅಂಗವಾಗಿ ಮತಯಂತ್ರ ಸಾಮಗ್ರಿಗಳ ವಿತರಣೆ ಇಂದು ನಡೆದಿದ್ದು , ಆಯಾ ಮತಗಟ್ಟೆಗೆ ತಲುಪಿಸಲಾಗಿದೆ.
ಮಂಜೇಶ್ವರ, ಕಾಸರಗೋಡು, ಉದುಮ ಕ್ಷೇತ್ರಗಳಿಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲೂ, ಕಾಞಂಗಾಡು, ತೃಕ್ಕರೀಪುರ ಕ್ಷೇತ್ರಗಳ ಪಡನ್ನಕ್ಕಾಡು ನೆಹರೂ ಕಾಲೇಜಿನಲ್ಲಿ ವಿತರಣೆ ನಡೆಯಿತು ಆಯಾ ಮತಗಟ್ಟೆಗಳಿಗೆ ಮಂಜೂರುಗೊಳಿಸಿದ ಸಿಂಗಲ್ ಪೋಸ್ಟ್ ಎಲೆಕ್ಟ್ರಾನಿಕ್ ಮತಯಂತ್ರಗಳು ಮತಗಟ್ಟೆಗ ಳಿಗೆ ಸಾಮಗ್ರಿಗಳನ್ನು ಸಾಗಿಸುವುದಕ್ಕಾಗಿ ವಾಹನ ವ್ಯವಸ್ಥೆ ಮಾಡಲಾಗಿದೆ.