×
Ad

ಈ 14 ದೇಶಗಳಲ್ಲಿ ಭಾರತದ ಲೈಸೆನ್ಸ್ ಇದ್ದರೆ ನೀವೇ ಡ್ರೈವ್ ಮಾಡಬಹುದು!

Update: 2016-05-15 14:05 IST

ಚಾಲನೆ ಮಾಡುವುದು ಪ್ರಯಾಣಿಸುವ ಅತ್ಯುತ್ತಮ ರೀತಿ. ಎಲ್ಲಿ ಬೇಕಾದರೂ ನಿಲ್ಲಿಸಬಹುದು ಮತ್ತು ಏನು ಬೇಕಾದರೂ ನೋಡಬಹುದು. ಸ್ವತಃ ವಾಹನ ಚಾಲನೆಯ ಮೂಲಕ ಪ್ರವಾಸ ಹೊರಡುವುದು ವಿಭಿನ್ನ ಅನುಭವ. ಈ ದೇಶಗಳಲ್ಲಿ ನಿಮಗೆ ಕಾರು ಬಾಡಿಗೆ ಪಡೆದು ಭಾರತೀಯ ಚಾಲನಾ ಪರವಾನಗಿ ತೋರಿಸಿ ಪ್ರಯಾಣಿಸುವ ಅವಕಾಶವಿದೆ.

ಜರ್ಮನಿ

ದೇಶವನ್ನು ಪ್ರವೇಶಿಸಿ ಆರು ತಿಂಗಳವರೆಗೆ ಭಾರತೀಯ ಚಾಲನಾ ಪರವಾನಗಿಯನ್ನೇ ಬಳಸಿ ನೀವು ಚಾಲನೆ ಮಾಡಬಹುದು. ರಾಯಭಾರ ಕಚೇರಿಯಿಂದ ಪರವಾನಗಿಯ ಅನುವಾದ ಕೊಡಬೇಕು. ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಗಿ ಹೊಂದಿರುವುದು ಉತ್ತಮ. ಇಲ್ಲಿನ ಕೆಲವು ರಸ್ತೆಗಳಲ್ಲಿ ವೇಗದ ಮಿತಿಯೇ ಇರುವುದಿಲ್ಲ.

ಬ್ರಿಟನ್

ಬ್ರಿಟನ್ ದೇಶದಲ್ಲಿ ಭಾರತೀಯ ಚಾಲನಾ ಪರವಾನಗಿ ಹಿಡಿದು ಒಂದು ವರ್ಷದವರೆಗೂ ಎಲ್ಲಿ ಬೇಕಾದರೂ ವಾಹನ ಚಲಾಯಿಸಬಹುದು. ಐಸಲ್ ಆಫ್ ಮ್ಯಾನ್ ಜಾಗಕ್ಕೆ ಭೇಟಿ ನೀಡಿದರೆ ವೇಗದ ಮಿತಿ ಇರುವುದಿಲ್ಲ.

ಅಮೆರಿಕ

ಈ ದೇಶಕ್ಕೆ ರಸ್ತೆಯ ಮೂಲಕ ಹೋದರೆ ಉತ್ತಮ ಮತ್ತು ಇಲ್ಲಿ ಒಂದು ವರ್ಷವಿಡಿ ಇಂಗ್ಲಿಷ್ ನಲ್ಲಿರುವ ಭಾರತೀಯ ಚಾಲನಾ ಪರವಾನಗಿ ಬಳಸಬಹುದು. ಸ್ಥಳೀಯ ಭಾಷೆಯ ಭಾರತೀಯ ಚಾಲನಾ ಪರವಾನಗಿ ಇದ್ದರೆ ಐಡಿಪಿ ಜೊತೆಯಲ್ಲಿರಬೇಕು. ರೂಟ್ 66 ನಿಮ್ಮನ್ನು ಚಿಕಾಗೋದಿಂದ ಸಾಂಟಾ ಮೊನಿಕಾ ಕಡೆಗೆ ಕರೆದೊಯ್ಯುತ್ತದೆ.

ಫ್ರಾನ್ಸ್

ಈ ದೇಶದಲ್ಲಿ ವಿದೇಶಿಯರು ಸ್ಥಳೀಯ ಚಾಲನಾ ಪರವಾನಗಿ ಮೂಲಕ ಒಂದು ವರ್ಷದವರೆಗೆ ಚಾಲನೆ ಮಾಡುವ ಅವಕಾಶವಿದೆ. ಫ್ರೆಂಚ್ ಅನುವಾದ ಇರಬೇಕು.

ಕೊರ್ಸಿಕಾದ ಪರ್ವತ ಪ್ರದೇಶದಲ್ಲಿ ಚಲಿಸುವಾಗ ನಿಮ್ಮ ಚಾಲನೆಯ ಪರೀಕ್ಷೆಯಾಗಲಿದೆ.

ಆಸ್ಟ್ರೇಲಿಯ

ನೀವು ಕೇವಲ ಭೇಟಿ ನೀಡುವುದಾಗಿದ್ದಲ್ಲಿ ಭಾರತೀಯ ಚಾಲನಾ ಪರವಾನಗಿ ಬಳಸಬಹುದು. ಇಂಗ್ಲಿಷಿನಲ್ಲಿರುವ ಭಾರತೀಯ ಚಾಲನಾ ಪರವಾನಗಿ ಇರಬೇಕು. ಅಲ್ಲದೆ ಐಡಿಪಿ ಇರಬೇಕು.

ಉತ್ತರ ಪ್ರಾಂತದ ಲೆಸೆಟರ್ ಹೆದ್ದಾರಿ

ಸಿಜರ್ಲಾಂಡ್

ಪ್ರಾಕೃತಿಕ ಸೌಂದರ್ಯದ ದೇಶದಲ್ಲಿ ಪ್ರವಾಸಿಗರಿಗೆ ಭಾರತೀಯ ಚಾಲನಾ ಪರವಾನಗಿ ಜೊತೆ ವಾಹನ ಚಲಾಯಿಸುವ ಅವಕಾಶವಿದೆ. ದೇಶದ ಉತ್ತರ ಮತ್ತು ದಕ್ಷಿಣ ಭಾಗವನ್ನು ಸೇರಿಸುವ ಸೇಂಟ್ ಗೊಟಾರ್ಡ್ ಪಾಸ್ ಗೆ ಭೇಟಿ ಕೊಡಿ.

ನ್ಯೂಜಿಲ್ಯಾಂಡ್

ಪೆಸಿಫಿಕ್ ನಲ್ಲಿರುವ ಸಣ್ಣ ದೇಶ ಅತ್ಯುತ್ತಮ ಚಾಲನಾ ರಸ್ತೆಗಳನ್ನು ಹೊಂದಿದೆ. ವರ್ಷದವರೆಗೆ ವಿದೇಶಿ ಪ್ರವಾಸಿಗರು ತಮ್ಮ ದೇಶದ ಚಾಲನಾ ಪರವಾನಗಿ ಬಳಸಬಹುದು. ನಿಮ್ಮ ಪರವಾನಗಿ ಮಾನ್ಯತೆ ಹೊಂದಿರುವ ವಾಹನಕ್ಕೇ ಅದನ್ನು ಬಳಸಬಹುದು.

ಥೇಮ್ಸ್ ನಿಂದ ಕೊರಮಂಡಲ್ ರಸ್ತೆ ಕಡೆಗೆ ಚಲಿಸಬೇಕು.

ನಿಮಗೆ ಭಾರತೀಯ ಚಾಲನಾ ಪರವಾನಗಿ ಬಳಸಿ ವಾಹನ ಚಲಾಯಿಸಲು ಬಿಡುವ ದೇಶಗಳು ಇವುಗಳು ಮಾತ್ರವಲ್ಲ. ದಕ್ಷಿಣ ಆಫ್ರಿಕಾ, ಮಾರಿಷಸ್, ಇಟಲಿ, ಕೆನಡಾ, ಸ್ಪೇನ್, ನಾರ್ವೆ ಮತ್ತು ಫಿನ್ಲಾಂಡ್ ಕೂಡ ನಿಮ್ಮನ್ನು ಭಾರತೀಯ ಚಾಲನಾ ಪರವಾನಗಿ ಬಳಸಿ ವಾಹನ ಚಲಾಯಿಸಲು ಅವಕಾಶ ಕೊಡುತ್ತದೆ.

ಕೃಪೆ: www.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News