ಇಡ್ಲಿ ಆಮದು ಆಹಾರ, ಭಾರತದ್ದಲ್ಲ!
ಈ ಕೆಲವು ಸಿಹಿಗಳನ್ನು ತಿನ್ನದೆ ನಮ್ಮ ಊಟ ಪೂರ್ಣವಾಗುವುದಿಲ್ಲ. ಆದರೆ ನಾವು ಭಾರತೀಯ ತಿನಿಸುಗಳೆಂದೇ ತಿಳಿದಿರುವ ಕೆಲವು ನಿಜವಾಗಿಯೂ ನಮ್ಮದಲ್ಲ!
ಸಮೋಸ
ಸಮೋಸ ಎನ್ನುವ ಹೆಸರು ಪರ್ಶಿಯನ್ ಪದವಾದ ಸಾನ್ ಬೊಸಗ್ ನಿಂದ ಬಂದಿದೆ. ಇದನ್ನು 10ನೇ ಶತಮಾನದಲ್ಲಿ ಮೊದಲು ತಯಾರಿಸಲಾಯಿತು. ಮುಸ್ಲಿಂ ವ್ಯಾಪಾರಿಗಳು ಮಧ್ಯಪ್ರಾಚ್ಯದಿಂದ ಇದನ್ನು ಭಾರತಕ್ಕೆ ತಂದಿದ್ದರು. ಮಾಂಸ, ಕಡಲೆ ಕಾಳು ಮತ್ತು ಮಸಾಲೆಗಳನ್ನು ನಡುವೆ ಇಟ್ಟು ತಯಾರಿಸುವ ತಿನಿಸು. ದೆಹಲಿ ಸಂಸ್ಥಾನದ ಕವಿ ಅಮೀರ್ ಖುಸ್ರೊ ಸಮೋಸವು 1300ರ ಕಾಲದಲ್ಲಿ ರಾಜರ ಪ್ರಿಯ ತಿನಿಸಾಗಿದ್ದನ್ನು ಬರೆದಿದ್ದಾರೆ.
ಕುಲ್ಫಿ
ಆಹಾರ ಇತಿಹಾಸಜ್ಞ ಕೆಟಿ ಆಚಾಯ ಪ್ರಕಾರ 16ನೇ ಶತಮಾನದಲ್ಲಿ ಕುಲ್ಫಿ ಭಾರತಕ್ಕೆ ಬಂದಿದೆ. ಇದು ಕೂಡ ಪರ್ಶಿಯನ್ ಭಾಷೆಯ ಶಬ್ದ. ಕುಲ್ಫಿ ಎಂದರೆ ಕವರ್ ಮಾಡಿದ ಕಪ್. ಪಾರಂಪರಿಕ ಕುಲ್ಫಿಯನ್ನು ವಿವರಿಸುತ್ತದೆ. ಭಾಷ್ಪೀಕರಿಸಿದ ಹಾಲು, ಕಡಲೆಗಳು, ಕೇಸರಿ ಮತ್ತು ಏಲಕ್ಕಿಗಳಿಂದ ತಯಾರಿಸಲಾಗುತ್ತದೆ. ಅಕ್ಬರನ ಪ್ರಿಯ ಆಹಾರವಾಗಿತ್ತು ಕುಲ್ಫಿ.
ಗುಲಾಬ್ ಜಾಮೂನು
ಪರ್ಶಿಯನ್ ಶಬ್ದ ಗೊಲ್ ಎಂದರೆ ಹೂವು ಮತ್ತು ಅಬ್ ಎಂದರೆ ನೀರು. ಇದರಿಂದ ಗುಲಾಬ್ ಶಬ್ದ ಬಂತು. ಜಾಮೂನು ಒಂದು ಹಣ್ಣಿನ ಹೆಸರು. ಮೊಘಲರ ಕಾಲದಲ್ಲಿ ಶಾಹಜಹಾನ್ ಖಾಸಗಿ ಅಡುಗೆಯಾತ ಮೈಖಲ್ ಕ್ರೊಂಡಲ್ ಗುಲಾಬ್ ಜಾಮೂನು ಪರ್ಶಿಯನ್ ಮೂಲದ ಸಿಹಿ ತಿನಿಸು ಎಂದು ಬರೆದಿದ್ದಾರೆ. ಭಾಷ್ಪೀಕರಿಸಿದ ಹಾಲಿನ ಘನವಸ್ತು ಮತ್ತು ಆಳವಾಗಿ ಕರಿದ ಮತ್ತು ರೋಸ್ ವಾಟರ್ ವಾಸನೆಯ ಸಕ್ಕರೆಯ ದ್ರವದಲ್ಲಿ ಮುಳುಗಿಸಿದ ಸಿಹಿ ತಿನಿಸು. ಅಂದಿನಿಂದ ಭಾರತದಲ್ಲಿ ಪ್ರಿಯ ತಿನಿಸಾಗಿದೆ.
ಜಿಲೇಬಿ
ಜಿಲೇಬಿ ಕೂಡ ಪರ್ಶಿಯನ್ ಆಹಾರ. ಇರಾನಿನಲ್ಲಿ ಇದನ್ನು ಜೂಲಾಬಿಯ ಎನ್ನುತ್ತಾರೆ. ರಂಜಾನ್ ಸಂದರ್ಭ ಇದನ್ನು ಹೆಚ್ಚು ಬಳಸಲಾಗುತ್ತದೆ. ಟರ್ಕಿ ಮತ್ತು ಗ್ರೀಸಲ್ಲಿ ಇದನ್ನು ಜಲೇಬಿ ಎನ್ನುತ್ತಾರೆ. ಮುಸ್ಲಿಂ ವ್ಯಾಪಾರಿಗಳು ಈ ತಿನಿಸನ್ನು ಭಾರತಕ್ಕೆ ಪರಿಚಯಿಸಿದರು. 13ನೇ ಶತಮಾನದಲ್ಲಿ ಮುಹಮ್ಮದ್ ಬಿನ್ ಹಸನ್ ಎನ್ನುವ ಅಡುಗೆಯಾತ ಇರಾನಿನಿಂದ ಇದು ಭಾರತಕ್ಕೆ ಬಂದಿರುವ ಬಗ್ಗೆ ಬರೆದಿದ್ದಾನೆ. ಹೆಸರು ಬೇಳೆಯಿಂದ ತಯಾರಿಸಿ ಆಳವಾಗಿ ಕರಿದು ಸಕ್ಕರೆ ನೀರಿನಲ್ಲಿ ಮುಳುಗಿಸುವ ಸಿಹಿತಿನಿಸು ಎನ್ನುವ ವಿವರವಿದೆ.
ಇಡ್ಲಿ
ಆಹಾರ ಇತಿಹಾಸಜ್ಞ ಕೆಟಿ ಆಚಾಯ ಹೇಳುವಂತೆ ಇಡ್ಲಿ ಭಾರತಕ್ಕೆ ಇಂಡೋನೇಷ್ಯದಿಂದ ಬಂದಿದೆ. ಈಶಾನ್ಯ ಏಷ್ಯ ದೇಶದ ಪಾರಂಪರಿಕ ಆಹಾರವಿದು. ಕ್ರಿಸ್ತ ಪೂರ್ವ 800ರಿಂದ 1200ರ ನಡುವೆ ಭಾರತಕ್ಕೆ ಬಂದಿದೆ. ಇನ್ನು ಕೆಲ ಇತಿಹಾಸಜ್ಞರ ಪ್ರಕಾರ ಇಡ್ಲಿಯನ್ನು ಭಾರತಕ್ಕೆ ಪರಿಚಯಿಸಿದ್ದು ಅರಬ್ ನಿವಾಸಿಗಳು. ಸ್ಟೀಮ್ ಮಾಡಿದ ಇಡ್ಲಿ ಸಂಸ್ಕರಿಸಿದ ಅಕ್ಕಿ ಮತ್ತು ಉದ್ದಿನ ಬೇಳೆಗಳ ಹಿಟ್ಟಿನಿಂದ ತಯಾರಾಗುತ್ತದೆ.
ಕೃಪೆ:indianexpress.com