×
Ad

ಜಗತ್ತಿನ 5 ಭೂಗರ್ಭ ನಗರಗಳು! ಜನರು ಇಲ್ಲಿ ಭೂಮಿಯೊಳಗೆ ವಾಸಿಸುತ್ತಾರೆ

Update: 2016-05-15 15:06 IST

ನೀವು ಜಗತ್ತಿನಲ್ಲಿ ಸ್ವಚ್ಛ ಸುಂದರ ಮನೋಹರ ನಗರಗಳ ಕುರಿತು ಕೇಳಿರಬಹುದು. ಈಗ ನಾವು ಜನವಾಸದ ಭೂಮಿಯ ಒಳಗಿನ ಐದು ಪ್ರಮುಖ ನಗರಗಳನ್ನು ನಿಮಗೆ ತಿಳಿಸಲಿದ್ದೇವೆ. ಈ ಹಿಂದೆ ಭೂಮಿಯ ಒಳಗಿನ ಈ ನಗರಗಳನ್ನು ಕೆಟ್ಟ ವಾತಾವರಣ,ಆಂತರಿಕ ಘರ್ಷಣೆ, ಯುದ್ಧ ಇತ್ಯಾದಿ ಕಾರಣಗಳಿಗಾಗಿ ಭೂಗರ್ಭದಲ್ಲಿ ನಿರ್ಮಿಸಲಾಗಿತ್ತು. ಈಗಂತೂ ಇವು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತನೆಯಾಗಿವೆ.

1)ಕೂಬರ್ ಪೆಡಿ(ಆಸ್ಟ್ರೇಲಿಯ): ಈ ನಗರ ದಕ್ಷಿಣ ಆಸ್ಟ್ರೇಲಿಯದಲ್ಲಿದೆ.

ಭೂಗರ್ಭದಲ್ಲಿ ಇರುವ ನಗರವನ್ನು ಈಗಲೂ ಬೇಸಿಗೆಯ ತಾಪ ಮತ್ತು ಕಾಡಿನ ನಾಯಿಗಳಿಂದ ರಕ್ಷಣೆ ಹೊಂದಲಿಕ್ಕಾಗಿ ಜನರು ಬಳಸುತ್ತಿದ್ದಾರೆ. ಇಲ್ಲಿ ಚರ್ಚ್, ಪಬ್, ಅಂಗಡಿ ಮತ್ತು ಕಬರಸ್ತಾನಹಳಿವೆ.

2)ಡೈರಿಂಕ್ಯೂ(ಟರ್ಕಿ): ಈ ನಗರ ಬಹಳ ಅಪೂರ್ವವಾದುದು.

ಇದನ್ನು ಯುದ್ಧದ ಹಾನಿಯಿಂದ ಪಾರಾಗಲಿಕ್ಕಾಗಿ ನಿರ್ಮಿಸಲಾಗಿದೆ. 20ನೇ ಶತಮಾನದಲ್ಲಿ ಇದನ್ನು ಟೂರಿಸ್ಟ್‌ಸ್ಪಾಟ್ ಮಾಡಲಾಯಿತು. ಪ್ರವಾಸಿಗರು ಇಲ್ಲಿ ಅಂಗಡಿಗಳು, ಚ್ಯಾಪೆಲ್‌ಗಳು, ತಳಮನೆಗಳು ಮುಂತಾದುವುಗಳನ್ನು ನೋಡಬಹುದಾಗಿದೆ. ಇಲ್ಲಿ ಒಂದು ಶಾಲೆಯೂ ಇದೆ.

3)ಡಿಕ್ಸಿಯಾ ಚೆಂಗ್(ಚೀನ): ಇದು ಬಹಳ ಸುಂದರ ಸ್ಥಳವಾಗಿದೆ. ಇದನ್ನು ಭೂಗರ್ಭದ ಗ್ರೇಟ್ ವಾಲ್ ಎಂದು ಹೇಳಲಾಗುತ್ತದೆ. ಇಲ್ಲಿ ವಾಯುದಾಳಿ ಮತ್ತು ಪರಮಾಣು ದಾಳಿಯಿಂದ ಪಾರಾಗಲಿಕ್ಕಾಗಿ ನಿರ್ಮಿಸಲಾಗಿದೆ. ಇಲ್ಲಿ ಶಾಲೆ, ಥಿಯೇಟರ್, ಆಸ್ಪತ್ರೆ, ರೆಸ್ಟೋರೆಂಟ್ ಮತ್ತು ರೋಲರ್ ಸ್ಕೆಟಿಂಗ್ ರಿಂಕ್ ಕೂಡ ಇವೆ.

4) ಮತಮಾಟ(ಟ್ಯುನೇಷಿಯ): ಟ್ಯುನೇಷಿಯದ ಈ ಸ್ಥಳ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಹಿಡಿದಿಡುತ್ತದೆ.

ಈ ನಗರ ಉಷ್ಣಕಾಲದಲ್ಲಿ ಇಲ್ಲಿನ ಜನರ ಮನೆಯೇ ಆಗಿಬಿಡುತ್ತದೆ. ಭೂಮಿಯ ಒಳಗೆ ಮನೆಯನ್ನು ಕಟ್ಟಿಸಲಾಗಿದೆ. ಪ್ರವಾಸಿಗರಿಗೆ ಇದೊಂದು ವಿಶೇಷ ಅನುಭೂತಿಯನ್ನು ನೀಡುವಸ್ಥಳವಾಗಿದೆ.

5)ಬರ್ಲಿನ್:ಜರ್ಮನಿಯ ಈ ಸ್ಥಳವನ್ನು ನೋಡುವಾಗಲೇ ಯಾರಿಗೂ ಇದನ್ನು ವಾಯುದಾಳಿಯಿಂದ ರಕ್ಷಣೆ ಪಡೆಯಲಿಕ್ಕಾಗಿ ನಿರ್ಮಿಸಲಾಗಿದೆ ಎಂದು ಮನವರಿಕೆಯಾಗುತ್ತದೆ.ಇಲ್ಲಿ ಬಾಣ, ಯುದ್ಧ ಫಿರಂಗಿಗಳು, ಮದ್ದುಗುಂಡುಗಳು ಮತ್ತು ನಾಝಿಗಳ ಫೋಟೊಗಳನ್ನೂ ನೋಡಬಹುದಾಗಿದೆ. ಇದೊಂದು ಪ್ರವಾಸಿ ತಾಣವಾಗಿದೆ   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News