ಈ 50 ದೇಶಗಳಿಗೆ ಭಾರತೀಯರು ತಲುಪಿದ ಮೇಲೆ ವೀಸಾ ಪಡೆದರಾಯಿತು!
ನೀವು ಪ್ರಯಾಣಿಸಬೇಕಾದ ಸ್ಥಳ ನಿಗಧಿಯಾಗಿದೆ ಮತ್ತು ಟಿಕೆಟು ಬುಕ್ ಮಾಡಲು ಸಿದ್ಧರಾಗಿದ್ದೀರಿ. ಆದರೆ ನಿಮ್ಮ ಕನಸಿನ ಪ್ರವಾಸ ಯೋಜಿಸುವಲ್ಲಿ ಅತೀ ಕಷ್ಟದ ಕೆಲಸವೆಂದರೆ ವೀಸಾ ಪಡೆಯುವುದು. ಆದರೆ ಈ 50 ದೇಶಗಳಲ್ಲಿ ನೀವು ತಲುಪಿದ ಮೇಲೂ ವೀಸಾ ಪಡೆದುಕೊಳ್ಳಬಹುದು ಎಂದು ತಿಳಿದು ನಿಮಗೆ ಅಚ್ಚರಿಯಾಗಲಿದೆ.
ಏಷ್ಯಾ
ಭಾರತೀಯರ ಮಟ್ಟಿಗೆ ಸರಳವಾದ ಮತ್ತು ಅತೀ ಹಿತಕರವಾದ ಸ್ಥಳಗಳು ಏಷ್ಯಾದಲ್ಲಿವೆ. ಶಾಪಿಂಗ್ ಸ್ವರ್ಗ ಥಾಯ್ಲಂಡ್ ಇರಬಹುದು ಅಥವಾ ಅತೀ ಪುಟ್ಟ ಅಚ್ಚರಿಯಾದ ಲಾವೋಸ್ ಇರಬಹುದು. ಕಾಂಬೋಡಿಯ, ಹಾಂಗ್ ಕಾಂಗ್, ಇಂಡೋನೇಷ್ಯಾ, ಜೋರ್ಡನ್, ನೇಪಾಳ, ಮಾಲ್ಡೀವ್ಸ್, ಮಕಾವು, ಶ್ರೀಲಂಕಾ ಮತ್ತು ಟೈಮರ್ ಲಸ್ಟೆ ಮೊದಲಾದ ದೇಶಗಳು ತಲುಪಿದ ಮೇಲೆ ವೀಸಾ ಕೊಡುತ್ತವೆ.
ಆಫ್ರಿಕಾ
ಆಫ್ರಿಕಾದ ಪ್ರಾಕೃತಿಕ ಇತಿಹಾಸ ಇಲ್ಲಿಗೆ ಹಲವು ಸಲ ಭೇಟಿ ಕೊಟ್ಟರೂ ಸಾಲದೆನಿಸುವಂತೆ ಮಾಡುತ್ತದೆ. ಹಕ್ಕಿಗಳ ರಾಗ ಕೇಳುತ್ತ ಶಾಂತ ಪರಿಸರದಲ್ಲಿ ಅಡ್ಡಾಡಬಹುದು. ಇತಿಯೋಪಿಯ ಮತ್ತು ಮಡಗಾಸ್ಕರ್ ನೋಡಬಹುದು. ಆಫ್ರಿಕಾದ ದೇಶಗಳಾದ ಕೀನ್ಯಾ, ಜಿಬೌಟಿ, ಗಿನಿಯಾ-ಬಿಸೌ, ಮಾರಿಷಸ್, ತಾಂಜಾನಿಯ, ಉಗಾಂಡ, ಬರುಂಡಿ, ಕೇಪ್ ವಡರ್, ಕೊಮೊರಸ್ ಮತ್ತು ಟೊಗೊ ಭೇಟಿ ಕೊಡಬಹುದು. ಮೊಜಾಂಬಿಕ್ ದೇಶ 30 ದಿನಗಳ ವೀಸಾ ಕೊಡುತ್ತದೆ. ಬೈರ, ನಪುಲ, ಮಪುಟೊ, ಪೆಂಬ ಮತ್ತು ಟೆಟೆ ರಿಟರ್ನ್ ಟಿಕೆಟ್ ಇದ್ದರೆ ವೀಸಾ ಕೊಡುತ್ತದೆ. ಮುಂದಿನ ಗುರಿಯ ದಾಖಲೆಗಳು ಮತ್ತು ನೆಲೆಸಲು ಕೈಯಲ್ಲಿ ಸಾಕಷ್ಟು ಹಣವಿರುವುದನ್ನು ತೋರಿಸಬೇಕು. ಸೀಷೆಲ್ಸ್ ತಲುಪಿದರೆ 3 ತಿಂಗಳು ನಿಲ್ಲಬಬಹುದು. ಆದರೆ ರಿಟರ್ನ್ ಟಿಕೆಟ್ ಇರಬೇಕು. ಹಣ ಮತ್ತು ವಸತಿ ದಾಖಲೆ ಬೇಕು.
ಉತ್ತರ ಅಮೆರಿಕ
ಸಂಗೀತ, ಕಡಲತೀರ ಮತ್ತು ಪರ್ವತ ಪ್ರದೇಶ ಇಲ್ಲಿನ ಆಕರ್ಷಣೆ. ಜಮೈಕ, ಸೈಂಟ್ ವಿನ್ಸೆಂಟ್, ಗ್ರೆನಡಿನ್ಸ್, ಟ್ರಿನಿಡಾಡ್ ಆಂಡ್ ಟೊಬಾಗೊ, ಎಲ್ ಸಾಲ್ವಡೋರ್, ಸೈಂಟ್ ಕಿಟ್ಸ್ ಮತ್ತು ನೆವಿಸ್ ಮತ್ತು ಸೇಂಟ್ ಲುಸಿಯಗಳು ತಲುಪಿದ ಮೇಲೆ ವೀಸಾ ಕೊಡುತ್ತವೆ.
ದಕ್ಷಿಣ ಅಮೆರಿಕ
ದಕ್ಷಿಣ ಅಮೆರಿಕದಲ್ಲಿ ವಸಾಹತು ಪಟ್ಟಣಗಳು ಮತ್ತು ಕಡಲತೀರಗಳನ್ನು ಕಾಣಬಹುದು. ಬೊಲಿವಿಯ ಮತ್ತು ಗ್ಯಾನ ದೇಶಗಳು ಭಾರತೀಯರಿಗೆ ತಲುಪಿದ ಮೇಲೆ ವೀಸಾ ಕೊಡುತ್ತವೆ.
ಆಸಿಯಾನ್ ದೇಶಗಳು
ಆಸಿಯಾನ್ ದೇಶಗಳು ಪೆಸಿಫಿಕ್ ಸಾಗರದ ದ್ವೀಪಗಳನ್ನು ಸುತ್ತುವರಿದಿವೆ. ಈಗ ಭಾರತೀಯರಿಗೆ ತಲುಪಿದ ಮೇಲೆ ವೀಸಾ ಕೊಡುತ್ತವೆ. ಫಿಜಿ, ಸಮೋವಾ, ನೌರು ಮತ್ತು ತುವಲು ಇದರಲ್ಲಿ ಸೇರಿದೆ. ಇವುಗಳಲ್ಲದೆ ಕಾಂಗೋ, ಎರಿಟ್ರಿಯ, ಗಾಬನ್, ಘಾನಾ, ಇರಾನ್, ಇಸ್ರೇಲ್, ಖಜಖಸ್ತಾನ್, ಕಿರ್ಜಿಸ್ತಾನ್, ಲೆಬನಾನದ್, ಲಿಬರಿಯ, ಮಂಗೋಲಿಯ, ಮ್ಯಾನ್ಮಾರ್, ಸಿಯೆರಾ ಲಿಯೋನ್, ಸುರಿನೇಮ್, ತುರ್ಕಮೆನಿಸ್ತಾನ ಮತ್ತು ವಿಯೆಟ್ನಾಂಗಳೂ ಸಹ ತಲುಪಿದ ಮೇಲೆ ವೀಸಾ ಕೊಡುತ್ತವೆ. ಆದರೆ ಆಯಾಯ ದೇಶಗಳ ಕೆಲವು ದಾಖಲೆ ಸಾಕ್ಷ್ಯ, ನಿರ್ಬಂಧಗಳನ್ನು ತಿಳಿದುಕೊಳ್ಳಬೇಕು.
ವೀಸಾ ಪಡೆಯಲು ಏನು ಬೇಕು?
ಸಾಮಾನ್ಯವಾಗಿ ಪ್ರವಾಸಿಗರು ತಲುಪಿದ ಮೇಲೆ ವೀಸಾ ಪಡೆಯಲು ರಿಟರ್ನ್ ಟಿಕೆಟುಗಳು, ಹೊಟೇಲ್ ರಿಸರ್ವೇಶನ್ ವಿವರಗಳು, ಸಾಕಷ್ಟು ಹಣವಿರುವ ದಾಖಲೆಯನ್ನು ತೋರಿಸಬೇಕು. ಪಾಸ್ ಪೋರ್ಟ್ ಗಾತ್ರದ ಫೋಟೋಗಳು ಬೇಕು. ಸಾಕಷ್ಟು ಖಾಲಿ ಪುಟಗಳಿರುವ ಪಾಸ್ ಪೋರ್ಟ್ ಬೇಕು. ಅಗತ್ಯವಿದ್ದರೆ ಶುಲ್ಕಕ್ಕೆ ಹಣವಿರಬೇಕು.
ಕೃಪೆ: indianexpress.com