ಪರಂಗಿಪೇಟೆಯಲ್ಲಿ ನೇತ್ರಾವತಿ ಉಳಿಸಿ ಹೊರಾಟದ ಪ್ರಚಾರಕ್ಕೆ ಚಾಲನೆ
Update: 2016-05-15 15:45 IST
ಫರಂಗಿಪೇಟೆ, 15: ನೆತ್ರಾವತಿ ನದಿ ತಿರುವು(ಎತ್ತಿನ ಹೊಳೆ) ಯೋಜನೆಯನ್ನು ವಿರೋದಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ನಡೆಸಲ್ಪಡುವ ಜಿಲ್ಲಾದಿಕಾರಿ ಕಛೇರಿ ಮುತ್ತಿಗೆ ಮತ್ತು ಸ್ವಯಮ್ ಪ್ರೇರಿತ ಬಂದ್ ಗೆ ಸಂಬಂಧಿಸಿ ಪ್ರಚಾರದ ಚಾಲನೆಯೂ ಪರಂಗಿಪೇಟೆಯಲ್ಲಿ ನಡೆಯಿತು.
ಸಬೆಯಲ್ಲಿ ಪಿಎ ರಹೀಮ್ ಉಪಾದ್ಯಕ್ಶರು ನೇತ್ರಾವತಿ ರಕ್ಷಣ ಸಂಯುಕ್ತ ಸಮಿತಿ, ಕೆ.ಎಚ್ ಅಬೂಬಕ್ಕರ್ ಉಪಾದ್ಯಕ್ಷರು ಹೊರಾಟ ಸಮಿತಿ, ಶಾಹುಲ್ ಎಸ್.ಎಚ್. ಎಸ್.ಡಿ.ಪಿ.ಐ ಬಂಟ್ವಾಲ ಕ್ಷೇತ್ರ ಸಮಿತಿ, ಸುಲೈಮಾನ್ ಉಸ್ತಾದ್ ಸದಸ್ಯರು ಪುದು ಗ್ರಾಮ ಪಂಚಾಯತ್, ಅಶ್ರಫ್ ಮಂಚಿ ಸದಸ್ಯರು ಎಸ್.ಡಿ.ಪಿ.ಐ ಮಂಗಳುರು ಕ್ಷೇತ್ರ, ಯೂಸುಫ್ ಆಲಡ್ಕ, ಮುಶ್ತಾಕ್ ತಲಪಾಡಿ, ಇಸ್ಮಾಯಿಲ್ ಬಾವ, ಕಾದರ್ ಅಮೆಮಾರ್ ಉಪಸ್ತಿತರಿದ್ದರು