ಪುತ್ತಿಲ: ಸಿಡಿಲು ಬಡಿದು ಯುವಕನಿಗೆ ಗಾಯ
Update: 2016-05-15 16:51 IST
ಪುತ್ತೂರು, ಮೇ 15: ಸಿಡಿಲು ಬಡಿದು ಯುವಕನೋರ್ವ ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಪುತ್ತಿಲ ಎಂಬಲ್ಲಿ ನಡೆದಿದೆ.
ಮುಂಡೂರು ಪುತ್ತಿಲ ನಿವಾಸಿ ಪುತ್ರಮೇರ ಎಂಬವರ ಪುತ್ರ ಬಾಬು(35)ಗಾಯಗೊಂಡವರು.
ಸಂಜೆ ವೇಳೆ ಸಿಡಿಲು ಬಡಿದಿದ್ದು ಮನೆ ಜಗಲಿಯಲ್ಲಿ ಕುಳಿತುಕೊಂಡಿದ್ದ ಬಾಬು ಅವರ ಸೊಂಟ ಹಾಗೂ ಕಾಲುಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಬಾಬು ಅವರ ಮನೆಗೆ ರವಿವಾರ ಬೆಳಗ್ಗೆ ಮುಂಡೂರು ಗ್ರಾಮಕರಣಿಕೆ ತುಳಸಿ, ಸ್ಥಳೀಯ ಮುಂದಾಳು ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ ಮತ್ತಿತರರು ಭೇಟಿ ನೀಡಿದ್ದಾರೆ.