ಕಾಪು: ಮೇ 16ರಂದು ಆಧ್ಯಾತ್ಮಿಕ ಮಜ್ಲಿಸ್
Update: 2016-05-15 18:44 IST
ಮಂಗಳೂರು, ಮೇ 15: ಹಿದಾಯತುಲ್ ಇಸ್ಲಾಂ ಮದ್ರಸ ಕಾಪು ಇದರ ಮಕ್ಕಳ ರಜಾ ಶಿಬಿರದ ಸಮಾರೋಪ ಸಮಾರಂಭವು ಮೇ 16ರಂದು ಮಗ್ರಿಬ್ ನಮಾಜಿನ ಬಳಿಕ ತಾಜುಶ್ಯರೀ ಉಸ್ತಾದುಲ್ ಅಸಾತೀದ್ ಅಲಿಕುಂಞ ಉಸ್ತಾದರ ನೇತೃತ್ವದಲ್ಲಿ ನಡೆಯಲಿದೆ.
ಮುಹಮ್ಮದ್ ಸ್ವಾದಿಖ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾಪು ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ.
ಸ್ಥಳೀಯ ಖತೀಬ ಬದ್ರುದ್ದೀನ್ ಅಹ್ವನಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಸುನ್ನೀ ಬಾಲ ಸಂಘ ಕಾಪು ಇದರ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.