ನ್ಯಾ. ಮುಕುಲ್ ಮುದ್ಗಲ್ ಫಿಫಾ ಆಡಳಿತ ಸಮಿತಿಯ ಡೆಪ್ಯುಟಿ ಚೇರ್ಮನ್

Update: 2016-05-15 13:28 GMT

ಹೊಸದಿಲ್ಲಿ, ಮೇ 15: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಜಾಗತಿಕ ಫುಟ್ಬಾಲ್ ಸಂಸ್ಥೆ ಫಿಫಾದ ಆಡಳಿತ ಸಮಿತಿಯ ಡೆಪ್ಯುಟಿ ಚೆರ್ಮನ್ ಆಗಿ ನೇಮಕಗೊಂಡಿದ್ದಾರೆ.
 ‘‘ ನಾನು ನೇಮಕಗೊಂಡಿರುವ ವಿಚಾರವನ್ನು ವೆಬ್‌ಸೈಟ್‌ನಲ್ಲಿ ನೋಡಿದೆ. ಅಧಿಕೃತ ಆದೇಶ ಇನ್ನೂ ನನ್ನ ಕೈಸೇರಿಲ್ಲ. ಇದು ಭಾರತದ ನ್ಯಾಯಾಂಗಕ್ಕೆ ಸಂದ ದೊಡ್ಡ ಗೌರವವಾಗಿದೆ ’’ ಎಂದು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿ ಮುಕಲ್ ಅವರು ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಆಯೋಜಿಸುವಾಗ ನ್ಯಾಯಾಲಯದ ಆದೇಶದಂತೆ ಮೇಲುಸ್ತುವಾರಿಯನ್ನು ನೋಡಿಕೊಂಡಿದ್ದರು. ಮೇ 27ರಂದು ದಿಲ್ಲಿಯ ಫಿರೋಝ್ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೆ ಕ್ವಾಲಿಫಯರ್ ಪಂದ್ಯದ ಮೇಲುಸ್ತುವಾರಿಯನ್ನು ಮುದ್ಗಲ್ ವಹಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಈ ಪಂದ್ಯಮುಗಿದ ಬಳಿಕ ಮುದ್ಗಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಯುರೋಪಿಯನ್ ಕೋರ್ಟ್‌ನ ನಿವೃತ್ತ ಜಸ್ಟೀಸ್ ಅಡ್ವಕೇಟ್ ಜನರಲ್ ಲೂಯಿಸ್ ಮಿಗುಲ್ ಮ್ಯಾಡುರೊ ಫಿಫಾ ಆಡಳಿತ ಸಮಿತಿಯ ಚೇರ್ಮನ್ ಆಗಿದ್ದಾರೆ. ಅಲ್ಲದೆ ಇವರು ಫಿಫಾ ಅಂತಾರಾಷ್ಟ್ರೀಯ ಪರಿಶೀಲನಾ ಸಮಿತಿಯ ಮುಖ್ಯಸ್ಥರಾಗುತ್ತಾರೆ. ಪ್ರಮುಖ ನಿರ್ಧಾರಗಳನ್ನು ಇವರು ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News