ಸುರತ್ಕಲ್: ಕಾರು ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಮೃತ್ಯು
Update: 2016-05-15 23:36 IST
ಸುರತ್ಕಲ್, ಮೇ 15: ರಸ್ತೆ ಅಪಘಾತಕ್ಕೆ ವ್ಯಕ್ತಿ ಮೃತಪಟ್ಟರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪಾವಂಜೆ ಅರಂದ್ ಎಂಬಲ್ಲಿ ನಡೆದಿದೆ.
ಮೃತರನ್ನು ಕಟೀಲು ಸಮೀಪದ ಗಿಡಿಗೆರೆ ನಿವಾಸಿ ಕಾಡಿಯ ಮುಗೇರ (50) ಎಂದು ಗುರುತಿಸಲಾಗಿದೆ.
ಖಂಡಿಗೆ ಜಾತ್ರೆಯಲ್ಲಿ ಭಾಗವಹಿಸಿ ಗಿಡಿಗೆರೆಯ ತನ್ನ ಮನೆಗೆ ತೆರಳುವ ಸಲುವಾಗಿ ಅರಂದ್ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಅತಿ ವೇಗದಿಂದ ಬಂದ ಕಾರು ರಸ್ತೆ ವಿಭಜಕವನ್ನು ಏರಿ ವಿರುದ್ಧ ದಿಕ್ಕಿನಲ್ಲಿ ಬಸ್ ಕಾಯುತ್ತಿದ್ದ ಕಾಡಿಯ ಮುಗೇರಾರಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಕಾಡಿಯ ಮುಗೇರಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.