×
Ad

ರಾಷ್ಟ್ರಧ್ವಜಕ್ಕೆ ಅವಮಾನ: ಮೋದಿ ವಿರುದ್ಧ ದೂರು ನೀಡಿದ ವ್ಯಕ್ತಿ ಮೇಲೆ ಹಲ್ಲೆ

Update: 2016-05-15 23:52 IST

ಹೊಸದಿಲ್ಲಿ, ಮೇ 15: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ನೀಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಪ್ರಕರಣವನ್ನು ಮುಂದುವರಿಸದಂತೆ ಬೆದರಿಕೆ ಹಾಕಲಾಗಿದೆ ಎಂದು ದೆಹಲಿ ನ್ಯಾಯಾಲಯಕ್ಕೆ ಶನಿವಾರ ತಿಳಿಸಲಾಗಿದೆ.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅರ್ಜಿದಾರ ಆಶೀಶ್ ಶರ್ಮಾ ಕೋರಿದ್ದಾರೆ. ಮೆಟ್ರೊ ಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧ ಸರ್ವಾರಿಯಾ ಅವರು ಅರ್ಜಿದಾರರ ಸಮನ್ಸ್ ಪೂರ್ವ ಸಾಕ್ಷಿ ದಾಖಲಿಸಿಕೊಳ್ಳುವ ವೇಳೆ ಇದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದೀಗ ಪ್ರಕರಣವನ್ನು ಜುಲೈ 30ಕ್ಕೆ ಮುಂದೂಡಲಾಗಿದೆ. ಮೇ 11ರಂದು ಮಧ್ಯರಾತ್ರಿ ಮನೆಪಕ್ಕದಲ್ಲೇ ನನ್ನನ್ನು ಹತ್ಯೆ ಮಾಡುವ ಯತ್ನ ನಡೆದಿದೆ. ಈ ಪ್ರಕರಣವನ್ನು ಇಲ್ಲಿಗೇ ಕೈಬಿಡದಿದ್ದರೆ, ಶೀಘ್ರವೇ ಹತ್ಯೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ವಿವರಿಸಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಮೋದಿ ತ್ರಿವರ್ಣಧ್ವಜವನ್ನು ತಮ್ಮ ಬೆವರು ಹಾಗೂ ಮುಖ ಒರಸಿಕೊಳ್ಳುವ ಸಲುವಾಗಿ ಬಳಸಿಕೊಂಡಿದ್ದರು. ಮೋದಿ ತಮ್ಮ ಮೂಗನ್ನೂ ಇದರಿಂದ ಸ್ವಚ್ಛಗೊಳಿಸಿಕೊಂಡರು. ಇಡೀ ವಿಶ್ವದ ಮಾಧ್ಯಮ ಹಾಗೂ ಭಾರತೀಯ ಮಾಧ್ಯಮಗಳು ಈ ದೃಶ್ಯವನ್ನು ಸೆರೆ ಹಿಡಿದಿವೆ ಎಂದು ಶರ್ಮಾ ಹೇಳಿದ್ದಾರೆ. 20ಕ್ಕೂ ಹೆಚ್ಚು ಬಾರಿ ಮೋದಿ ತ್ರಿವರ್ಣಧ್ವಜಕ್ಕೆ ಅವಮಾನ ಮಾಡಿದ್ದಾರೆ ಎನ್ನುವುದು ಶರ್ಮಾ ಅವರ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News