ಎಸೆಸೆಲ್ಸಿ: ಜೋಕಟ್ಟೆ ಅಂಜುಮನ್ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ
Update: 2016-05-16 18:34 IST
ಮಂಗಳೂರು, ಮೇ 16:ಪ್ರಸಕ್ತ ಸಾಲಿನ ಎಸೆಸೆಲ್ಸಿಪರೀಕ್ಷೆಗೆ ಹಾಜರಾದ ಜೋಕಟ್ಟೆ ಅಂಜುಮನ್ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಈ ಪೈಕಿ ನಾಲ್ವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಶಾಯಿದಾ 570 (ಶೇ 91.2), ಫಾತಿಮಾ ಆಶಿರಾ 551(ಶೇ 88.16), ಜಮೀಲಾ ಅಫ್ರತ್ 540(ಶೇ 86.4), ಖತೀಜಾ ಸಜ್‌ರೀನಾ 538 (ಶೇ 86.08)ಅಂಕ ಗಳಿಸಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.