ಎಸೆಸೆಲ್ಸಿ: ಖೈರಿಯಾ ಟ್ರಸ್ಟ್ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
Update: 2016-05-16 19:09 IST
ಮಂಗಳೂರು, ಮೇ 16: ತೊಕ್ಕೊಟ್ಟು ಸಮೀಪದ ಖೈರಿಯಾ ಟ್ರಸ್ಟ್ ಅಧೀನದಲ್ಲಿರುವ ಅನಾಥ ಮತ್ತು ನಿರ್ಗತಿಕ ಹೆಣ್ಣುಮಕ್ಕಳ ಸಂಸ್ಥೆಯ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾದ 13 ವಿದ್ಯಾರ್ಥಿನಿಯರಲ್ಲಿ 11 ಮಂದಿ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ.
ಈ ವಿದ್ಯಾರ್ಥಿಗಳು ಸೈಯದ್ ಮದನಿ ಪ್ರೌಢಶಾಲೆ ಹಳೆಕೋಟೆ, ಉಳ್ಳಾಲ ಶಾಲೆಯಲ್ಲಿ ಕಲಿಯುತ್ತಿದ್ದರು. ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರ ಪೈಕಿ ಸಾಜಿದಾ (530), ಸ್ವಾಲಿದಾ (523), ಆಯಿಷತ್ ತಶ್ರೀಷಾ (481), ಫಾತಿಮತ್ ಮಸೂದಾ ( 428), ಅಫ್ರತ್ (419), ಉನೈಸ (410) ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.