×
Ad

ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಮೃತ್ಯು

Update: 2016-05-16 23:20 IST

ಮಂಗಳೂರು, ಮೇ 16: ನಗರದ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಶೇಖರ್ ನಲ್ಕೆ (30) ಎಂಬವರು ತೀವ್ರವಾಗಿ ಅಸ್ವಸ್ಥಗೊಂಡು ರವಿವಾರ ರಾತ್ರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಡಬ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟು ಶೇಖರ್ ನಲ್ಕೆ ಬಂಧಿತನಾಗಿದ್ದರು. ಕಳೆದ 10 ತಿಂಗಳಿನಿಂದ ಮಂಗಳೂರು ಜೈಲಿನಲ್ಲಿದ್ದ ಶೇಖರ್ ನಲ್ಕೆಗೆ ಶುಕ್ರವಾರ ತೀವ್ರವಾಗಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅವರನ್ನು ವೆನ್ಲಾಕ್‌ನಲ್ಲಿರುವ ಖೈದಿಗಳ ಸೆಲ್‌ನಲ್ಲಿ ದಾಖಲಿಸಲಾಗಿತ್ತು. ಕಿಡ್ನಿವೈಫಲ್ಯಗೊಂಡುತೀವ್ರವಾಗಿ ಅಸ್ವಸ್ಥಗೊಂಡಿದ್ದ ಶೇಖರ್ ನಲ್ಕೆ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News