×
Ad

ಮೂಳೂರು ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್‌ಗೆ ಶೇ.100 ಫಲಿತಾಂಶ

Update: 2016-05-16 23:29 IST

ಉಡುಪಿ, ಮೇ 16: ಮೂಳೂರು ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್‌ನ ಅಧೀನದಲ್ಲಿರುವ ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾದ 74 ವಿದ್ಯಾರ್ಥಿಗಳಲ್ಲಿ 13 ಮಂದಿ ವಿಶಿಷ್ಟ ಶ್ರೇಣಿ, 49 ಪ್ರಥಮ ಮತ್ತು 11 ಮಂದಿ ದ್ವಿತೀಯ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ.

ಶಾಲೆಗೆ 100 ಶೇ. ಫಲಿತಾಂಶ ಬಂದಿದ್ದು 604 ಅಂಕಗಳೊಂದಿಗೆ ಝಿನೀರ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಸಂಸ್ಥೆಯ ಉಳಿದ ವಿಭಾಗಗಳಾದ ರೆಸಿಡೆನ್ಸಿಯಲ್ ಸ್ಕೂಲ್, ಹಿಪ್ಳುಲ್ ಖುರ್‌ಆನ್, ದಾರುಲ್ ಮಸಾಕೀನ್ ಮುಂತಾದವುಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಎರಡು ಮಾಧ್ಯಮದಲ್ಲೂ ಉತ್ತಮ ಫಲಿತಾಂಶ ಬಂದಿದೆ.

ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಸಂಸ್ಥೆಯ ಸಂಚಾಲಕರು ಮ್ಯಾನೇಜರ್, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಅಧ್ಯಾಪಕರು ಹಾಗೂ ವಸತಿ ವಿಭಾಗದ ಸಿಬ್ಬಂದಿಯನ್ನು ಸಂಸ್ಥೆಯ ಅಧ್ಯಕ್ಷ ಅಸೈಯದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಲ್ ಹಾಗೂ ಡಿಕೆಎಸ್ಸಿ ಕೇಂದ್ರ ಸಮಿತಿ ಪದಾಧಿಕಾರಿಗಳು ಮತ್ತು ಮರ್ಕಝ್ ಆಡಳಿತ ಸಮಿತಿಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News