ಪುತ್ತೂರು: ತಾಲೂಕಿನ 13 ಪ್ರೌಢಶಾಲೆಗಳಿಗೆ ಶೇ.100 ಫಲಿತಾಂಶ
ಪುತ್ತೂರು, ಮೇ 16: 2016-17ನೆ ಸಾಲಿನ ಎಸೆಸೆಲ್ಸಿ ಫಲಿತಾಂಶ ಸೋಮವಾರ ಸಂಜೆ ಪ್ರಕಟಗೊಂಡಿದ್ದು ತಾಲೂಕಿನ 76 ಶಾಲೆಗಳ ಪೈಕಿ ಲಭ್ಯವಾದ ಮಾಹಿತಿಯಂತೆ 2 ಸರಕಾರಿ ಶಾಲೆಗಳು ಸೇರಿದಂತೆ ಒಟ್ಟು 13 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ.
ಸುಧಾನ ಪ್ರೌಢಶಾಲೆ ನೆಹರೂನಗರ, ಸೈಂಟ್ ಮೇರಿಸ್ ಪ್ರೌಢಶಾಲೆ ಉಪ್ಪಿನಂಗಡಿ, ಪ್ರತಿಭಾ ಪ್ರೌಢಶಾಲೆ ಪಟ್ಟೆ, ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ಎಂಪಿಎಂ ಪ್ರೌಢಶಾಲೆ ಮುರ, ಬೆಥನಿ ಆಂಗ್ಲಮಾಧ್ಯಮ ಪ್ರೌಢಶಾಲೆ ಪಾಂಗ್ಲಾಯಿ, ವೌಂಟನ್ ವ್ಯೆ ಆಂಗ್ಲಮಾಧ್ಯಮ ಪ್ರೌಢಶಾಲೆ ಸಾಲ್ಮರ, ಸಂತ ಜಾರ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಇಂದ್ರಪ್ರಸ್ತ ವಿದ್ಯಾಲಯ ಉಪ್ಪಿನಂಗಡಿ, ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ತೆಂಕಿಲ, ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು, ಶ್ರೀ ಗಜಾನನ ಆಂಗ್ಲಮಾಧ್ಯಮ ಪ್ರೌಢಶಾಲೆ ಹನುಮಗಿರಿ ಮತ್ತು ಖಲೀಲ್ ಸ್ವಲಾಹ್ ವಿದ್ಯಾಸಂಸ್ಥೆ ಗಾಳಿಮುಖ ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ. ಈ ಪೈಕಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಸತತ 14ನೆ ಬಾರಿಗೆ ಶೇ.100 ಫಲಿತಾಂಶ ಪಡೆದುಕೊಂಡಿದೆ.
ಈ ಬಾರಿ ಪ್ರಥಮವಾಗಿ ಪುತ್ತೂರಿನ 2 ಸರಕಾರಿ ಪ್ರೌಢಶಾಲೆಗಳು ಶೇ.100 ದಾಖಲಿಸಿಕೊಂಡಿದ್ದು, ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ, ಸರಕಾರಿ ಪ್ರೌಢಶಾಲೆ ಮಣಿಕ್ಕರ ಶೇ.100 ಫಲಿತಾಂಶ ಪಡೆದಿರುವ ಪ್ರೌಢಶಾಲೆಗಳು.
ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ತೆಂಕಿಲ ಶೇ. 98.5, ಸರಕಾರಿ ಪ್ರೌಢಶಾಲೆ ಶಾಂತಿನಗರ ಶೇ. 96.29, ಸೈಂಟ್ ಜೋಕಿಮ್ಸ್ ಪ್ರೌಢಶಾಲೆ ಕಡಬ ಶೇ. 97.22, ಸಂತಜಾರ್ಜ್ ಪ್ರೌಢಶಾಲೆ ನೆಲ್ಯಾಡಿ ಶೇ. 96.26, ಡಾ.ಶಿವರಾಮ ಕಾರಂತ ಪ್ರೌಢಶಾಲೆ ಪುತ್ತೂರು ಶೇ. 92.45, ಸರ್ಕಾರಿ ಪ್ರೌಢಶಾಲೆ ಮಂಜುನಾಥ ನಗರ ಶೇ. 88.89, ಸುಬೋಧ ಪ್ರೌಡಶಾಲೆ ಪಾಣಾಜೆ 88.8, ಸರ್ವೋದಯ ಪ್ರೌಢಶಾಲೆ ಪೆರಿಯಡ್ಕ ಶೇ. 97.97, ಸರಕಾರಿ ಪ್ರೌಢಶಾಲೆ ಸರ್ವೆ ಶೇ. 77.44, ಸರಕಾರಿ ಪದವಿ ಪೂರ್ವ ಕಾಲೇಜು ಕೆಯ್ಯೂರು ಶೇ. 77, ಸರಕಾರಿ ಜ್ಯೂನಿಯರ್ ಕಾಲೇಜು ಉಪ್ಪಿನಂಗಡಿ ಶೇ. 77, ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆ ಈಶ್ವರಮಂಗಲ ಶೇ. 80.43, ಸರ್ವೋದಯ ಪ್ರೌಢಶಾಲೆ ಸುಳ್ಯಪದವು ಶೇ. 87 ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ ಶೇ. 79 ಫಲಿತಾಂಶ ಪಡೆದುಕೊಂಡಿದೆ.