ಎಸ್ಸೆಸ್ಸೆಲ್ಸಿ: ಮೂಡುಬಿದಿರೆ ಜೈನ ಹೈಸ್ಕೂಲ್‌ನ ಶಿಲ್ಪಾಗೆ 621 ಅಂಕಗಳು

Update: 2016-05-16 18:22 GMT

ಮೂಡುಬಿದಿರೆ, ಮೇ 16: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ಜೈನ್ ಹೈಸ್ಕೂಲಿನ 214 ವಿದ್ಯಾರ್ಥಿಗಳ ಪೈಕಿ 192 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 90 ಫಲಿತಾಂಶ ದಾಖಲಿಸಿದೆ.

ಒಟ್ಟು 22 ವಿದ್ಯಾರ್ಥಿಗಳು ಶೇ.90ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 33 ವಿದ್ಯಾರ್ಥಿಗಳು ಶೇ. 85ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿ ಶಿಲ್ಪಾಜೆ. ಶೆಟ್ಟಿ 625ರಲ್ಲಿ 621 ಅಂಕಗಳನ್ನು ಪಡೆದು ಮೂಡುಬಿದಿರೆ ವಲಯಕ್ಕೆ ಅಗ್ರಸ್ಥಾನಿಯಾಗಿಯಾಗಿದ್ದಾಳೆ.

ಶಿಲ್ಪಾಳ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಅಭಿನಂದಿಸಿದ್ದಾರೆ. ಲೆನಿಟಾ ಪ್ರಜ್ಞಾ ಅರಾನ್ನಾ 614, ಪ್ರಣಾವ್ ಎಂ.ಸಿ. ಆಚಾರ್ಯ 613, ಸಂಜನ್ 612, ಶ್ವೇತಾ ಎಂ 610, ಪ್ರವ್ 609, ಶೃತಿಕಾ 608, ಅಮೃತಾ 602, ಅಂಕಗಳನ್ನು ಗಳಿಸಿ ವೈಯಕ್ತಿಕ ಗರಿಷ್ಠ ಅಂಕಗಳಿಕೆಯ ಸಾಧನೆ ಮೆರೆದಿದ್ದಾರೆ.

ಇಂಜಿನಿಯರ್ ಆಗುವಾಸೆ: ಶಿಲ್ಪಾ

ಇರುವೈಲಿನ ಜಯರಾಮ ಶೆಟ್ಟಿ ಸುಜಾತಾ ದಂಪತಿಯ ಮೂವರು ಮಕ್ಕಳ ಪೈಕಿ ಶಿಲ್ಪಾಹಿರಿಯಾಕೆ. 625ರಲ್ಲಿ 621 ಅಂಕಗಳನ್ನು ಗಳಿಸಿರುವ ಶಿಲ್ಪಾ ಕನ್ನಡದಲ್ಲಿ 125, ಇಂಗ್ಲೀಷ್‌ನಲ್ಲಿ 99, ಹಿಂದಿಯಲ್ಲಿ 100, ಗಣಿತದಲ್ಲಿ 98, ವಿಜ್ಞಾನದಲ್ಲಿ 99, ಸಮಾಜದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ.

615 ಅಂಕಗಳ ನಿರೀಕ್ಷೆಯಲ್ಲಿದ್ದೆ ಎನ್ನುವ ಶಿಲ್ಪಾಗೆ ಮುಂದೆ ವಿಜ್ಞಾನದಲ್ಲಿ ಪಿಸಿಎಂಸಿ ಕಲಿತು ಎಲೆಕ್ಟ್ರಾನಿಕ್ಸ್ ಯಾ ಮಾಹಿತಿ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಕಲಿಯುವಾಸೆ ಹೊಂದಿದ್ದಾರೆ. ಕ್ರೀಡೆಯಲ್ಲಿ ಹಾಕಿ, ವಾಲಿಬಾಲ್, ಫುಟ್ಬಾಲ್‌ನಲ್ಲಿ ಗುರುತಿಸಿಕೊಂಡಿರುವ ಶಿಲ್ಪಾಗ್ರಾಮಾಂತರ ಪರಿಸರದಿಂದ ಪೇಟೆಯಲ್ಲಿ ಕಲಿತು ಮಾಡಿದ ಸಾಧನೆ ಬಗ್ಗೆ ಹೆತ್ತವರಿಗೆ ಹೆಮ್ಮೆಯಿದೆ. ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎನ್ನುವುದು ಶಿಲ್ಪಾರ ಅನಿಸಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News