ಚುಟುಕು ಸುದ್ದಿಗಳು

Update: 2016-05-16 18:26 GMT

ಕೋಳಿಅಂಕಕ್ಕೆ ದಾಳಿ
ಶಂಕರನಾರಾಯಣ, ಮೇ 16: ಬೆಳ್ವೆ ಗ್ರಾಮದ ಗೋಳಿಯಂಗಡಿ ಲಕ್ಷ್ಮೀ ಬಾರ್ ಬಳಿ ಮೇ 15ರಂದು ಸಂಜೆ ವೇಳೆ ಕೋಳಿ ಅಂಕಕ್ಕೆ ಶಂಕರನಾರಾಯಣ ಪೊಲೀಸರು ದಾಳಿ ನಡೆಸಿ 6 ಕೋಳಿ ಹುಂಜ ಹಾಗೂ 2,015 ರೂ. ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಹನ ಕಳವು
ಪುತ್ತೂರು, ಮೇ 16: ಮನೆ ಸಮೀಪ ನಿಲ್ಲಿಸಲಾಗಿದ್ದ ಆಕ್ಟೀವಾ ಡಿಯೋ ದ್ವಿಚಕ್ರ ವಾಹನವೊಂದು ಕಳವಾಗಿರುವ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಮೂಡೋಡಿ ಎಂಬಲ್ಲಿ ರವಿವಾರ ನಡೆದಿದೆ. ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಸತೀಶ್ ಮನೆಯ ಬಳಿ ನಿಲ್ಲಿಸಿದ್ದ ಆಕ್ಟೀವಾ ಡಿಯೋವನ್ನು ಕಳ್ಳರು ಕಳವು ಮಾಡಿರುವುದಾಗಿ ತಿಳಿದು ಬಂದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತೀಶ್‌ರ ಮನೆ ಸಂಪ್ಯ ಗ್ರಾಮಾಂ ತರ ಠಾಣಾ ವ್ಯಾಪ್ತಿಗೆ ಸೇರಿದ್ದರೂ, ಅವರು ಆಕ್ಟಿವಾ ಡಿಯೋ ನಿಲುಗಡೆ ಮಾಡಿದ್ದ ರಸ್ತೆ ಸ್ಥಳನಗರ ಠಾಣಾ ವ್ಯಾಪ್ತಿಗೆ ಸೇರಿರುವುದರಿಂದ ಯಾವ ಠಾಣೆಗೆ ದೂರು ನೀಡಬೇಕೆಂಬ ಗೊಂದ ಲವುಂಟಾಯಿತು. ಸಂಪ್ಯ ಠಾಣೆಗೆ ದೂರು ನೀಡಲು ಹೋಗಿ, ಬಳಿಕ ಪುತ್ತೂರು ನಗರ ಠಾಣಾಯಲ್ಲಿ ದೂರು ದಾಖಲಿಸಬೇಕಾಯಿತು. 

ವ್ಯಕ್ತಿ ಆತ್ಮಹತ್ಯೆ
ಕಾಪು, ಮೇ 16: ವಿಪರೀತ ಕುಡಿತದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕರಿಯ (61) ಎಂಬವರು ಮೇ 15ರಂದು ಪಾಂಗಾಳ ಗ್ರಾಮದ ಸದಡಿ ಎಂಬಲ್ಲಿರುವ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಕಾರ್ಕಳ, ಮೇ 16: ಇಲ್ಲಿಗೆ ಸಮೀಪದ ಮುಂಡ್ಕೂರಿನ ಶಾಂಭವಿ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ನಿಟ್ಟೆ ಕಾಲೇಜಿನ ವಿದ್ಯಾರ್ಥಿ ಹಾಗೂ ಸ್ಥಳೀಯ ನಿವಾಸಿ ಪ್ರದೀಪ್(22) ಎಂದು ಗುರುತಿಸಲಾಗಿದೆ. ಈತ ತನ್ನ ಮೂವರು ಗೆಳೆಯರೊಂದಿಗೆ ಸ್ನಾನಕ್ಕೆಂದು ಶಾಂಭವಿ ಹೊಳೆಗೆ ಹೋಗಿದ್ದರು. ಅಲ್ಲಿ ನಾಲ್ವರು ನೀರಿನಲ್ಲಿ ಈಜುತ್ತಿದ್ದಾಗ ಪ್ರದೀಪ್ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಆಘಾತ: ಯುವಕ ಮೃತ್ಯು
ಕಾರ್ಕಳ, ಮೇ 16: ಮನೆಯಲ್ಲಿ ಬಲ್ಬ್ ಅಳವಡಿಸುವ ವೇಳೆ ವಿದ್ಯುತ್ ಆಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಬೆಳ್ಮಣ್ ಗ್ರಾಮದ ಬೊನ್ಲಾಡಿಯ ಮೇ 15ರಂದು ರಾತ್ರಿ 8:30ಕ್ಕೆ ನಡೆದಿದೆ.
ಮೃತರನ್ನು ಬೊನ್ಲಾಡಿಯ ಸಾಧು ಶೆಟ್ಟಿ ಎಂಬವರ ಪುತ್ರ ಗುಣಪಾಲ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಇವರು ಮನೆಯ ಕೆಲಸ ಮಾಡುತ್ತಿರುವಾಗ ಬೆಳಕಿನ ವ್ಯವಸ್ಥೆಗಾಗಿ ಮನೆಯ ಹೊರಗಡೆಯ ಬಲ್ಬಿನ ಸ್ವಿಚ್ ಬೋರ್ಡ್ ನಿಂದ ವಯರ್ ಮೂಲಕ ಒಳಗಿನ ಚಾವಡಿಗೆ ಬಲ್ಬ್ ಅಳವಡಿಸಲು ವಯರನ್ನು ಜೋಡಿಸುತ್ತಿದ್ದರು. ಈ ಸಂದರ್ಭ ವಯರಿನಲ್ಲಿ ವಿದ್ಯುತ್ ಹರಿದು ಕೈಗೆ ವಿದ್ಯುತ್ ಸ್ಪರ್ಶವಾಗಿ ನೆಲಕ್ಕೆ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡ ಇವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾಂತ್ರಿಕ ದೋಣಿಗಳ ಪರಿಶೀಲನೆ
ಮಂಗಳೂರು/ಉಡುಪಿ, ಮೇ 16: ಮೀನುಗಾರಿಕಾ ಇಲಾಖೆಯಿಂದ ಸಾಧ್ಯತಾ ಪತ್ರ ಪಡೆಯದೇ ನಿರ್ಮಿಸಲಾದ 163 ಮೀನುಗಾರಿಕಾ ದೋಣಿಗಳನ್ನು ಸಚಿವ ಸಂಪುಟ ಸಭೆ ತೀರ್ಮಾನಿಸಿದಂತೆ ಒಂದಾವರ್ತಿಗೆ ಸಕ್ರಮಗೊಳಿಸಿ ಆದೇಶಿಸಲಾಗಿದೆ. ಸಂಬಂಧಪಟ್ಟ ದೋಣಿ ಮಾಲಕರು ದೋಣಿಯ ಬಗ್ಗೆ ಸೂಕ್ತ ದಾಖಲೆಗಳನ್ನು ಅಥಾರೈಸ್ಡ್ ಅಕಾರಿಗಳಿಗೆ ಸಲ್ಲಿಸಿ ಯಾಂತ್ರಿಕ ದೋಣಿಗಳನ್ನು ಪರಿಶೀಲನೆಗೆ ಹಾಜರುಪಡಿಸುವಂತೆ ಮೀನುಗಾರಿಕಾ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

ಹತ್ತು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಮೃತ್ಯು
ಮಂಜೇಶ್ವರ, ಮೇ 16: ಹತ್ತು ವರ್ಷಗಳ ಹಿಂದೆ ನಡೆದ ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಜನತಾದಳ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಮಂಗಲ್ಪಾಡಿ ಗ್ರಾಪಂ ಮಾಜಿ ಸದಸ್ಯ ಟಿಂಬರ್ ಅಬ್ದುಲ್ಲ-ಆಯಿಶಾ ದಂಪತಿಯ ಪುತ್ರ ಉಪ್ಪಳ ಮಣ್ಣಂಗುಳಿ ಸುಹನಾ ಮಂಝಿಲ್ ನಿವಾಸಿ ಮುಹಮ್ಮದ್ ಯಾಝ್ (16)ಮೃತ ಬಾಲಕನಾಗಿದ್ದಾನೆ.
ಹತ್ತು ವರ್ಷಗಳ ಹಿಂದೆ ಮಣ್ಣಂಗುಳಿಯಲ್ಲಿ ಮನೆ ಬಳಿ ರಸ್ತೆ ಬದಿ ಆಟವಾ ಡುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಚಿಕಿತ್ಸೆಯಲ್ಲಿದ್ದನು. ಆದರೆ ಎರಡು ವಾರಗಳ ಹಿಂದೆ ಬಾಲಕನಿಗೆ ನ್ಯುಮೋನಿಯಾ ಬಾಸಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಮಧ್ಯೆ ರವಿವಾರ ರಾತ್ರಿ ಮೃತಪಟ್ಟನು. ಮೃತನು ತಂದೆ, ತಾಯಿ, ಆರು ಮಂದಿ ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.

ಬೈಕ್‌ಗೆ ಕಾರು ಢಿಕ್ಕಿ: ಗುತ್ತಿಗೆದಾರ ಮೃತ್ಯು
ಮಂಜೇಶ್ವರ, ಮೇ 16: ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆದಾರ ಮೃತಪಟ್ಟಿದ್ದಾರೆ.
ಮೊಗ್ರಾಲ್ ಪುತ್ತೂರು ಕೋಟಕುನ್ನು ಕೋಟೆ ರಸ್ತೆಯ ಅಂದುಮಾನ್‌ರ ಪುತ್ರ ಮುಹಮ್ಮದ್ ರಫೀಕ್(34)ಮೃತಪಟ್ಟ ವ್ಯಕ್ತಿ. ರವಿವಾರ ಸಂಜೆ ಬಂದ್ಯೋಡಿನ ಸಮೀಪದ ಮಲ್ಲಂಗೈಯಲ್ಲಿ ಅಪಘಾತ ನಡೆದಿತ್ತು. ಮುಹಮ್ಮದ್ ರಫೀಕ್ ಹಾಗೂ ಕಾರ್ಮಿಕ ಉತ್ತರಪ್ರದೇಶ ನಿವಾಸಿ ಬೆಂಡಿ (35)ಎಂಬವರು ರವಿವಾರ ಸಂಜೆ ಉಪ್ಪಳದಿಂದ ಮೊಗ್ರಾಲ್‌ಗೆ ತೆರಳುತ್ತಿದ್ದಾಗ ಮಲ್ಲಂಗೈಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಅಪಘಾತ ನಡೆದಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೆ ಮುಹಮ್ಮದ್ ರಫೀಕ್ ಸೋಮವಾರ ಮುಂಜಾನೆ ಕೊನೆಯುಸಿರೆಳೆದರು.ಮೃತರು ತಂದೆ,ತಾಯಿ,ಪತ್ನಿ,ಇಬ್ಬರು ಪುತ್ರ ಹಾಗೂ ಸಹೋದರರನ್ನು ಅಗಲಿದ್ದಾರೆ.

ಕಾರ್ಕಳ: ಮನೆಗೆ ನುಗ್ಗಿ ಕಳವು
ಕಾರ್ಕಳ, ಮೇ 16: ಹಿರಿಯಂಗಡಿ ರೋಡ್‌ನ ಬೈಲುಗದ್ದೆ ಎಂಬಲ್ಲಿರುವ ರವೀಂದ್ರನಾಥ್ ರಾವ್‌ರ ಮನೆಗೆ ಮೇ 5ರಿಂದ 15ರ ಮಧ್ಯೆ ನುಗ್ಗಿದ ಕಳ್ಳರು ಸೊತ್ತುಗಳನ್ನು ಕಳವುಗೈದಿರುವ ಬಗ್ಗೆ ವರದಿಯಾಗಿದೆ. ಮನೆಯ ಮುಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು,ದೇವರ ಕೊಣೆಯಲ್ಲಿದ್ದ 16,000ರೂವೌಲ್ಯದ ಅರ್ಧ ಕೆ.ಜಿ. ತೂಕದ ಬೆಳ್ಳಿಯ ಪ್ರಭಾ ವಳಿ ಮತ್ತು ಮಲಗುವ ಕೋಣೆಯ ಕಪಾಟಿನಲ್ಲಿರಿಸಿದ್ದ ಸುಮಾರು 2,000 ರೂ. ಮೌಲ್ಯದ ಟ್ಯಾಬ್‌ನ್ನು ಕಳವು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News