12ನೆ ತರಗತಿ ಪಾಸು ಮಾಡಿದ12ರ ಹರೆಯದ ಇಬ್ಬರು ಬಾಲಕರು
ಜೈಪುರ, ಮೇ 17: ಹನ್ನೆರಡರ ಹರೆಯದ ಇಬ್ಬರು ಬಾಲಕರು 12ನೆ ತರಗತಿ ಪಾಸು ಮಾಡುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.
ಆಗ್ರಾದ ಆಕಾಶ್ ಖಾತ್ವಾನಿ ಮತ್ತು ಜೈಪುರದ ಅಭಾಸ್ ಶರ್ಮ ಈ ಸಾಧನೆ ಮಾಡಿದ ಹುಡುಗರು
ರವಿವಾರ ಸಂಜೆ ಉತ್ತರ ಪ್ರದೇಶ ಪರೀಕ್ಷಾ ಮಂಡಳಿ ನಡೆಸಿದ 12ನೆ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಕಾಶ್ ಶೇ.74 ಅಂಕಗಳೊಂದಿಗೆ ಪ್ರಥಮ ದರ್ಜೆ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾನೆ.
ಅದ್ಬುತ ಸಾಧನೆ ಮಾಡಿರುವ ಬಾಲಕ ಆಕಾಶ್ ಮುಂದೆ ಎಂಜಿನಿಯರ್ ಆಗಿ , ದೇಶ ಸೇವೆ ಸಲ್ಲಿಸಲು ಬಯಸಿದ್ದಾನೆ. ಬಿ.ಟೆಕ್ ಪ್ರವೇಶ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾನೆ. ಆಕಾಶ್ ಎರಡು ವರ್ಷಗಳ ಹಿಂದೆ ಶೇ 78 ಅಂಕಗಳೊಂದಿಗೆ ಹತ್ತನೇ ತರಗತಿ ಪಾಸಾಗಿದ್ದನು. ಆಗ ಆತನ ವಯಸ್ಸು 10 ವರ್ಷವಾಗಿತ್ತು.
ಆಕಾಶ್ ತಂದೆ ಸತೀಶ್ ಖಾತ್ವಾನಿ ಕೋಚಿಂಗ್ ಸೆಂಟರ್ ಹೊಂದಿದ್ದಾರೆ. 2007 ರಲ್ಲಿ ಅವರು ಮೂರು ವರ್ಷದ ಆಕಾಶ್ ನನ್ನು ಆಗ್ರಾದ ಪಬ್ಲಿಕ್ ಶಾಲೆಯಲ್ಲಿ 1ನೆ ತರಗತಿ ಸೇರಿಸಿದ್ದರು. ಆತ ಒಂದನೆ ತರಗತಿ ಪಾಸಾಗಿದ್ದನು. 6ನೆ ತರಗತಿ ತಲುಪಿದಾಗ ಆತನಿಗೆ ತನ್ನ ತರಗತಿಯ ಪಠ್ಯ ಪುಸ್ತಕಗಳಲ್ಲಿ ಆಸಕ್ತಿ ಕಡಿಮೆಯಾಯಿತು. 10ನೆ ತರಗತಿಯ ಪುಸ್ತಕದ ಕಡೆಗೆ ಗಮನ ಹರಿಸಿದನು. ಬಳಿಕ ಆಕಾಶ್ ನನ್ನು ಹತ್ತಿರದ ಶಾಲೆಗೆ 10ನೆ ತರಗತಿಗೆ ಸೇರಿಸಲಾಯಿತು ಎಂದು ತಾಯಿ ಕಾಮಿನಿ ಖಾತ್ವಾನಿ ಹೇಳಿದ್ದಾರೆ.
ಆಕಾಶ್ ಸಹೋದರಿಯರು ಇದೇ ರೀತಿ ಸಾಧನ ೆಮಾಡಿದ್ದಾರೆ. 15ರ ಒಬ್ಬಳು ಅಕ್ಕ ಹಿಂದೂಸ್ತಾನ್ ಕಾಲೇಜಿನಲ್ಲಿ ಎಂಬಿಎ ಕಲಿಯುತ್ತಿದ್ದಾಳೆ. ಹದಿನಾಲ್ಕರ ಹರೆಯದ ಇನ್ನೊಬ್ಬಳು ಅಕ್ಕ ಆರ್ಟಿಟೆಕ್ಚರ್‌ನಲ್ಲಿ ಡಿಪ್ಲೋಮಾ ಶಿಕ್ಷಣ ಪಡೆಯುತ್ತಿದ್ದಾಳೆ.
ಅಭಾಸ್ ಶರ್ಮ
ರಾಜಸ್ಥಾನದ ಜೈಪುರದ ಹನ್ನೆರಡರ ಹರೆಯದ ಬಾಲಕ ಅಭಾಸ್ ಶರ್ಮ 12 ನೆ ತರಗತಿ ಪಾಸು ಮಾಡುವ ಮೂಲಕ ಅಪೂರ್ವ ಸಾಧನೆ ಮಾಡಿದ ಇನ್ನೊಬ್ಬ ಬಾಲಕ.
ಶರ್ಮ ರಾಜಸ್ಥಾನ ಪರೀಕ್ಷಾ ಮಮಡಳಿ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 600ಅಂಕಗಳ ಪೈಕಿ 325ಅಂಕಗಳನ್ನು ಪಡೆದಿದ್ದಾನೆ.ಶೇ 65 ಅಂಕಗಳೊಂದಿಗೆ ಪ್ರಥಮ ದರ್ಜೆ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾನೆ.
ಶರ್ಮ ಎರಡು ವರ್ಷಗಳ ಹಿಂದೆ ಹತ್ತನೇ ತರಗತಿ ಪಾಸಾಗಿದ್ದನು. ಆಗ ಆತನ ವಯಸ್ಸು 10 ವರ್ಷವಾಗಿತ್ತು.
ಅದ್ಬುತ ಸಾಧನೆ ಮಾಡಿರುವ ಬಾಲಕ ಅಭಾಸ್ ಶರ್ಮ ಮುಂದೆ ವೈದ್ಯನಾಗಿ, ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸಿದ್ದಾನೆ.
,,,,,,,,,,,,,,,,,,